alex Certify
ಕನ್ನಡ ದುನಿಯಾ       Mobile App
       

Kannada Duniya

ಹೆದ್ದಾರಿಯಲ್ಲೇ ವೇಶ್ಯಾವಾಟಿಕೆ, 28 ಯುವತಿಯರು ಅರೆಸ್ಟ್

ಮಧ್ಯಪ್ರದೇಶದಾದ್ಯಂತ ಹೆದ್ದಾರಿಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಮಂಡ್ಸೌರ್ ಜಿಲ್ಲೆಯಲ್ಲಿದ್ದ ಡೇರಾಗಳ ಮೇಲೆ ದಾಳಿ ಮಾಡಿ 8 ಅಪ್ರಾಪ್ತರು ಸೇರಿದಂತೆ 28 ಯುವತಿಯರನ್ನು ಬಂಧಿಸಿದ್ದಾರೆ. ನೀಮುಚ್-ಮಾಹು ಚತುಷ್ಪಥ ಹೆದ್ದಾರಿ ಪಕ್ಕದಲ್ಲಿ ಈ ದಂಧೆ ನಡೆಯುತ್ತಿತ್ತು.

ಮಹಿಳಾ ಪೊಲೀಸರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಖಾಕಿಗಳು ಜೊತೆಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಭಾಗದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ್ಲೇ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಬಂಧಿತ ಯುವತಿಯರನ್ನೆಲ್ಲ ವಿಚಾರಣೆಗೆ ಒಳಪಡಿಸಲಾಗಿದೆ.

ಅಪ್ರಾಪ್ತೆಯರಿಗೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೌನ್ಸೆಲಿಂಗ್ ನಡೆಸಲಿದ್ದಾರೆ. ಈ ಭಾಗದಲ್ಲಿ 70ಕ್ಕೂ ಹೆಚ್ಚು ವೇಶ್ಯಾವಾಟಿಕೆಯ ಡೇರಾಗಳು ತಲೆಯೆತ್ತಿವೆ. ಸುಮಾರು 15,000ಕ್ಕೂ ಹೆಚ್ಚು ಮಹಿಳೆಯರು ದಂಧೆಯಲ್ಲಿ ತೊಡಗಿದ್ದಾರೆಂಬ ಅನುಮಾನ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...