alex Certify
ಕನ್ನಡ ದುನಿಯಾ       Mobile App
       

Kannada Duniya

ಚಂಡೀಗಢದಲ್ಲಿದ್ದುಕೊಂಡು ಆನ್ಲೈನ್ ಮೂಲಕ ಶಿಮ್ಲಾದಲ್ಲಿ ನಡೆಸ್ತಿದ್ರು ಸೆಕ್ಸ್ ರಾಕೆಟ್

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಪೊಲೀಸರು ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಬಣ್ಣ ಬಯಲು ಮಾಡಿದ್ದಾರೆ. ಶಿಮ್ಲಾ ಪೊಲೀಸರು ಆನ್ಲೈನ್ ಮೂಲಕ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಿಎಸ್ಪಿ ನೇತೃತ್ವದ ತಂಡ ಚಂಡೀಗಢದಲ್ಲಿದ್ದ ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಮಶೋಬ್ರ ಬಳಿ ಇಬ್ಬರು ದಲ್ಲಾಳಿಗಳು ಹಾಗೂ ಇಬ್ಬರು ಹುಡುಗಿಯರನ್ನು ಪೊಲೀಸರು ಬಂಧಿಸಿದ್ದಾರೆ. ತುಂಬಾ ಬುದ್ಧಿವಂತಿಕೆ ಹಾಗೂ ಎಚ್ಚರಿಕೆಯಿಂದ ಆನ್ಲೈನ್ ನಲ್ಲಿ ಇವ್ರು ಸೆಕ್ಸ್ ರಾಕೆಟ್ ನಡೆಸುತ್ತಿದ್ದರು ಎನ್ನಲಾಗಿದೆ. ಗಣ್ಯರು ಹಾಗೂ ಪ್ರವಾಸಿಗರನ್ನು ಮಾತ್ರ ಗ್ರಾಹಕರನ್ನಾಗಿಸಿಕೊಂಡಿದ್ದ ಇವರು ಹಿಮಾಚಲ ಪ್ರದೇಶದ ಯಾವುದೇ ನಂಬರ್ ನಿಂದ ಕರೆ ಬಂದ್ರೂ ತೆಗೆದುಕೊಳ್ಳುತ್ತಿರಲಿಲ್ಲ.

ಗ್ರಾಹಕರ ನಂಬರ್ ಮೊದಲು ಪರಿಶೀಲನೆ ಮಾಡಿ, ಗ್ರಾಹಕರು ಯಾವ ಹೊಟೇಲ್ ನಲ್ಲಿದ್ದಾರೆಂಬುದನ್ನು ಖಾತ್ರಿಪಡಿಸಿಕೊಂಡ ನಂತ್ರ ಅವ್ರಿಗೆ ವಾಟ್ಸಾಪ್    ಮೂಲಕ ಹುಡುಗಿಯರ ಫೋಟೋ ಕಳುಹಿಸುತ್ತಿದ್ದರು. ನಂತ್ರ 20-30 ಸಾವಿರ ರೇಟ್ ಫಿಕ್ಸ್ ಆಗ್ತಿತ್ತು. ಹಣ ಖಾತೆಗೆ ಜಮಾ ಆಗ್ತಿದ್ದಂತೆ ಹುಡುಗಿಯರನ್ನು ಚಂಡೀಗಢದಿಂದ ಶಿಮ್ಲಾಗೆ ಕರೆದುಕೊಂಡು ಬರ್ತಿದ್ದರು. ಮಧ್ಯೆ ಮಧ್ಯೆ ಗ್ರಾಹಕರಿಗೆ ಕರೆ ಮಾಡಿ ಅಪಾಯವಿದ್ಯಾ ಎಂದು ವಿಚಾರಿಸಿಕೊಳ್ತಿದ್ದರು. ಪೊಲೀಸರು ಬೀಸಿದ ಜಾಲಕ್ಕೆ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಸೆಕ್ಸ್ ರಾಕೆಟ್ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...