alex Certify
ಕನ್ನಡ ದುನಿಯಾ       Mobile App
       

Kannada Duniya

ಮುಗ್ದವಾಗಿ ಕಾಣುವ ಈ ಮಹಿಳೆ ಅಂತಿಂತವಳಲ್ಲ

women_fez7xao

ಫೋಟೋದಲ್ಲಿ ಕಾಣ್ತಿರುವ ಸುಂದರ ಮಹಿಳೆ ಅಂತಿಂತವಳಲ್ಲ. ಮುಗ್ದಳಂತೆ ಕಾಣುವ ಈಕೆ ನಿಜ ಬಣ್ಣ ಈಗ ಬಯಲಾಗಿದೆ. ಹೈಪ್ರೋಫೈಲ್ ಬ್ಲಾಕ್ಮೇಲ್ ಪ್ರಕರಣದಲ್ಲಿ ಈಕೆಯನ್ನು ಬಂಧಿಸಲಾಗಿದೆ. ಒಂದು ವರ್ಷದಲ್ಲಿ 6 ಗಣ್ಯರಿಂದ 60 ಲಕ್ಷ ವಸೂಲಿ ಮಾಡಿದ್ದಾಳೆ ಈಕೆ.

ಈಕೆಯದೊಂದು ಗ್ಯಾಂಗೇ ಇದೆ. ಉದ್ಯಮಿಯೊಬ್ಬರಿಂದ 10 ಲಕ್ಷ ರೂಪಾಯಿ ಪಡೆಯುವ ವೇಳೆ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಗೋವಿಂದಗಢ ನಿವಾಸಿ ಮಹೇಶ್ ಕುಮಾರ್ ಯಾದವ್ ಹಾಗೂ ಮಾಳ್ವೀಯ ನಗರ ನಿವಾಸಿ ವಂದನಾ ಭಟ್ ಹಾಗೂ ಮುರಳಿಪುರ ನಿವಾಸಿ ಪೂನಂ ಕನ್ವರ್ ಬಂಧಿತರು. ಕಳೆದ ಒಂದು ವರ್ಷಗಳಿಂದ  ಬ್ಲಾಕ್ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮುಖ್ಯ ಆರೋಪಿ ಅಡ್ವೊಕೇಟ್ ಅನಿಲ್ ತಲೆಮರೆಸಿಕೊಂಡಿದ್ದಾನೆ.

ಮಸಾಜ್ ಪಾರ್ಲರ್ ಗೆ ಗಣ್ಯರನ್ನು ಕರೆಯಿಸಿಕೊಳ್ಳುತ್ತಿದ್ದ ಮಹಿಳೆಯರು ಅವರ ಜೊತೆ ಸಂಬಂಧ ಬೆಳೆಸುತ್ತಿದ್ದರು. ನಂತ್ರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡ್ತಾ ಇದ್ದರು. ಗ್ಯಾಂಗ್ ನಲ್ಲಿದ್ದ ಪುರುಷರು ಗಣ್ಯರಿಗೆ ಕರೆ ಮಾಡಿ ಸಂಧಾನದ ಬಗ್ಗೆ ಮಾತನಾಡ್ತಾ ಇದ್ದರು. 10-15 ಲಕ್ಷ ನೀಡಿದಲ್ಲಿ ಕೇಸ್ ವಾಪಸ್ ಪಡೆಯುವುದಾಗಿ ವ್ಯವಹಾರ ಕುದುರಿಸುತ್ತಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...