alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳಿಂದ ಬಾಲಕಿಯನ್ನು ರಕ್ಷಿಸಿದ ನಾಯಿ

ಮನೆಯಲ್ಲಿ ಸಾಕಿದ ನಾಯಿಯೊಂದು ತನ್ನ ಮಾಲಕಿಯನ್ನು ಅತ್ಯಾಚಾರಿಗಳಿಂದ ರಕ್ಷಿಸಿರುವ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯ ಪ್ರದೇಶದ ಸಾಗರ್ ಎಂಬ ಊರಿನಲ್ಲಿ 14 ವರ್ಷದ ಬಾಲಕಿ ರಾತ್ರಿ ಸೊಳ್ಳೆಗಳ ಹಾವಳಿ ನಿಯಂತ್ರಿಸಲು ಹೊಗೆ ಹಾಕಿಕೊಳ್ಳುವ ಉದ್ದೇಶದಿಂದ ಕಟ್ಟಿಗೆ ತರಲು ಮನೆಯಿಂದ ಹೊರಬಂದಿದ್ದಾಳೆ. ಈ ವೇಳೆ ಇಬ್ಬರು ವ್ಯಕ್ತಿಗಳು ಆಕೆಗೆ ಚಾಕು ತೋರಿಸಿ ಬಲವಂತವಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಕೆ ಸಹಾಯಕ್ಕಾಗಿ ಕೂಗಿದ್ದಾಳೆ.

ಇದನ್ನು ಕೇಳಿಸಿಕೊಂಡ ಆಕೆಯ ಸಾಕು ನಾಯಿ ಅಲ್ಲಿಗೆ ಆಗಮಿಸಿದೆಯಲ್ಲದೇ ದಾಳಿ ಮಾಡುತ್ತಿದ್ದವರ ಮೇಲೆ ಎಗರಿಬಿದ್ದಿದೆ. ಅವರನ್ನು ಕಚ್ಚಿದ್ದು, ಆರೋಪಿತರು ಚಾಕುವಿನಿಂದ ದಾಳಿ ಮಾಡಿದರೂ ನಾಯಿ ಮಾತ್ರ ಅವರನ್ನು ಕಚ್ಚುವುದನ್ನು ನಿಲ್ಲಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಪ್ರಕರಣ ದಾಖಲಾಗಿದ್ದು, ಐಶು ಅಹಿರ್ವರ್ (39) ಮತ್ತು ಪುನೀತ್ ಅಹಿರ್ವರ್ (24) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...