alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ…! ಒಬ್ಬಳೇ ಯುವತಿಯನ್ನ ಒಂದೇ ದಿನದ ಅಂತರದಲ್ಲಿ ಎರಡು ಬಾರಿ ಪ್ರಾಣಾಪಾಯದಿಂದ ಕಾಪಾಡಿದ

ಅ ವ್ಯಕ್ತಿಯ ಹೆಸರು ಸಯ್ಯದ್ ನಾಸಿರ್ ಹುಸೇನ್. ಹುಸೇನ್ ನಿಜ ಜೀವನದಲ್ಲಿ ನಡೆದಂತಾ ಎರಡು ಪ್ರತ್ಯೇಕ ಘಟನೆಗಳು ಅವರನ್ನು ಗ್ರೇಟ್ ಎನ್ನುವಂತೆ ಮಾಡಿದೆ. ಯಾಕಂದ್ರೆ ಜಸ್ಟ್ ಒಂದು ದಿನದ ಅವಧಿಯಲ್ಲಿ ಹುಸೇನ್ ಒಂದೇ ಯುವತಿಯನ್ನು ಎರಡು ಬಾರಿ ಆತ್ಮಹತ್ಯೆಯಿಂದ ಕಾಪಾಡಿದ್ದಾರೆ.

ಮುಂಬೈನ ವಾಸಿ ಬ್ರಿಡ್ಜ್ ನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಬೈಕ್ ನಲ್ಲಿ ಹೋಗುವ ವೇಳೆ ಹುಸೇನ್ ಗಮನಿಸಿದ್ರು. ಕೂಡಲೇ ಆಕೆಯನ್ನ ತಡೆದು ಆರು ಗಂಟೆಗಳ ಕಾಲ ಆಕೆಯನ್ನ ಸಾವಿನ ಯೋಚನೆಯಿಂದ ಹೊರಬರುವಂತೆ ಮಾಡಿ ಆಕೆಯನ್ನ ಮನೆಗೆ ಕರೆತಂದು ಬಿಟ್ಟರು.

ಆದ್ರೆ ಇದೇ ಯುವತಿ ಮತ್ತೆ ಆತ್ಮಹತ್ಯೆಗೆ ಯತ್ನಿಸಬಹುದು ಅನ್ನೋ ಒಂದು ಸಣ್ಣ ಯೋಚನೆ ಅವರಿಗೆ ಬಂದಿತ್ತು. ಮತ್ತೆ ಮಂಗಳವಾರ ಆಕೆಯ ಮನೆಗೆ ಬಂದ ಹುಸೇನ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವತಿಯನ್ನ ಮತ್ತೆ ಸಾವಿನ ದವಡೆಯಿಂದ ಪಾರು ಮಾಡಿದರು. ಹಗ್ಗದಲ್ಲಿ ನೇತಾಡುತ್ತಿದ್ದ ಯುವತಿಯನ್ನು ಬಾಗಿಲು ಒಡೆದು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಲಾಯ್ತು.

ಆನಂತರದಲ್ಲಿ ಸೂಕ್ತ ಸಮಯದಲ್ಲಿ ಆಕೆಯನ್ನ ಆಸ್ಪತ್ರೆಗೆ ಸೇರಿಸಿದ್ದರಿಂದ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡು ವರ್ಷದ ಹಿಂದೆಯೂ ಹುಸೇನ್ ಇಂತದ್ದೇ ಪರಿಸ್ಥಿತಿಯಲ್ಲಿ ಯುವತಿಯ ಪ್ರಾಣ ಕಾಪಾಡಿ ಹೀರೋ ಆಗಿದ್ದರು. ಎರಡು ವರ್ಷದ ಹಿಂದಿನ ಘಟನೆ ಮತ್ತೆ ಅವರ ಬದುಕಿನಲ್ಲಿ ಮರುಕಳಿಸಿದ್ದು ನಿಜಕ್ಕೂ ವಿಚಿತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...