alex Certify
ಕನ್ನಡ ದುನಿಯಾ       Mobile App
       

Kannada Duniya

ರಜೆ ಪಡೆಯಲು ಭಯ ಪಡ್ತಾರೆ ಭಾರತೀಯರು….ಕಾರಣವೇನು ಗೊತ್ತಾ?

ನಮ್ಮಲ್ಲಿ ಉದ್ಯೋಗಿಗಳು ರಜೆ ಕೇಳೋದಿಕ್ಕೆ ಭಯ ಪಡ್ತಾರೆ. ರಜೆಗಳಿದ್ದರೂ ಅದರಲ್ಲಿ ಉಪಯೋಗಿಸದೇ ಮುಗಿದುಹೋಗೋದೇ ಹೆಚ್ಚು. ಹೀಗ್ಯಾಕೆ ಅನ್ನೋದ್ರ ಬಗ್ಗೆ ಬ್ರಿಟೀಶ್ ಏರ್ ವೇಸ್ ಒಂದು ಸರ್ವೆ ನಡೆಸಿದೆ. ಅದರ ಪ್ರಕಾರ ಕೆಲಸದ ಒತ್ತಡ ಹಾಗೂ ಬದಲಾಗುವ ಆದ್ಯತೆಯಿಂದಾಗಿ ಇರುವ ರಜೆಗಳನ್ನೂ ಉದ್ಯೋಗಿಗಳು ತೆಗೆದುಕೊಳ್ಳುವುದಿಲ್ಲವಂತೆ.

ಸರ್ವೆಯಲ್ಲಿ 2 ಸಾವಿರ ಭಾರತೀಯ ಉದ್ಯೋಗಿಗಳನ್ನು ಬಳಸಿಕೊಳ್ಳಲಾಗಿದ್ದು, ಭಾರತದಲ್ಲಿ ಬಹುತೇಕ ಕಡೆಗಳಲ್ಲಿ 17 ದಿನ ರಜೆಗಳಿರುತ್ತವೆ. ಅದರಲ್ಲೂ ಶೇ.42 ರಷ್ಟು ಜನರು ಕೆಲಸದ ಒತ್ತಡಗಳಿಂದ ಹೊರಬರಲಾಗದೇ ಹಾಗೂ ಇನ್ನೂ ಶೇ.26 ರಷ್ಟು ಜನರು ಆಫೀಸಿನ ಜವಾಬ್ದಾರಿಗಳಿಂದ ಹೊರಬರಲಾರದೇ ರಜೆಗಳನ್ನೇ ತೆಗೆದುಕೊಳ್ಳುವುದಿಲ್ಲ.

ಇನ್ನು ಭಾರತದ ಉದ್ಯೋಗಿಗಳಲ್ಲಿ ಶೇ. 65 ರಷ್ಟು ಜನರು ಹಾಲಿಡೇಗಳನ್ನು ಉಪಯೋಗಿಸದೇ ಬಿಟ್ಟುಬಿಡುತ್ತಾರೆ. ಕೆಲಸದ ಒತ್ತಡವೇ ಇದಕ್ಕೆ ಕಾರಣ. ಇನ್ನು ಶೇ.60 ರಷ್ಟು ಜನರು  ರಜೆ ತೆಗೆದುಕೊಂಡಾಗಲೂ ಕೆಲಸ ಅವರ ಬೆನ್ನು ಬಿಡೋದಿಲ್ಲ. ಶೇ. 59 ರಷ್ಟು ಜನರು ಮಾತ್ರ ರಜೆಯ ಸಮಯವನ್ನು ಸಂತೋಷದಿಂದ ಕಳೆಯುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...