alex Certify
ಕನ್ನಡ ದುನಿಯಾ       Mobile App
       

Kannada Duniya

19 ವರ್ಷದ ಯುವತಿಗೆ ಶಬ್ಬಾಶ್ ಎಂದ ಅಕ್ಷಯ್ ಕುಮಾರ್

akshay kumar twitterಒಬ್ಬಂಟಿ ಯುವತಿಯರು ಕಾಮುಕರಿಂದ ತಪ್ಪಿಸಿಕೊಳ್ಳಲು ಸಾಹಸ ತರಬೇತಿ ಪಡೆದುಕೊಳ್ಳುವುದು ಅಗತ್ಯವೆಂಬ ಮಾತುಗಳು ಕೇಳಿ ಬರುತ್ತವೆ. ಈ ರೀತಿ ಸಾಹಸ ತರಬೇತಿ ಪಡೆದಿದ್ದ ಯುವತಿಯೊಬ್ಬಳು ತನ್ನ ಮೇಲೆ ಅಕ್ರಮಣ ಮಾಡಿದವನಿಗೆ ಸರಿಯಾಗಿಯೇ ಇಕ್ಕಿದ್ದಾಳೆ. ಆಕೆಯ ಈ ಕಾರ್ಯಕ್ಕೆ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡಾ ಶಬ್ಬಾಶ್ ಎಂದಿದ್ದಾರೆ.

ಮುಂಬೈ ನಿವಾಸಿ 19 ವರ್ಷದ ಶ್ರೇಯಾ ನಾಯಕ್ ಈ ಸಾಹಸ ತೋರಿದ ದಿಟ್ಟ ಯುವತಿಯಾಗಿದ್ದು, ಈಕೆ ಇತ್ತೀಚೆಗೆ ತನ್ನ ಮನೆಗೆ ಮರಳಿ ಬರುತ್ತಿರುವ ವೇಳೆ ಏಕಾಏಕಿ ಎದುರಾದವನೊಬ್ಬ ಅಕ್ರಮಣ ನಡೆಸಲು ಮುಂದಾಗಿದ್ದಾನೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಆದಿತ್ಯ ಠಾಕ್ರೆ, ಮುಂಬೈನ ವಿವಿಧ ಪ್ರದೇಶಗಳಲ್ಲಿ ಯುವತಿಯರಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳುವ ತರಬೇತಿಯನ್ನು ಉಚಿತವಾಗಿ ನೀಡುವ ಸೆಂಟರ್ ತೆರೆದಿದ್ದು, ಶ್ರೇಯಾ ನಾಯಕ್ ಕೂಡಾ ಇಲ್ಲಿ ತರಬೇತಿ ಪಡೆದಿದ್ದಳು. ತನ್ನ ಮೇಲೆ ಯುವಕ ಅಕ್ರಮಣ ಮಾಡಲು ಮುಂದಾದ ವೇಳೆ ಶ್ರೇಯಾ ತಾನು ಕಲಿತಿದ್ದ ಪಟ್ಟುಗಳನ್ನು ಪ್ರಯೋಗಿಸಿದ್ದಾಳೆ. ಆತನಿಗೆ ಹಿಗ್ಗಾಮುಗ್ಗಾ ಇಕ್ಕಿದ್ದು, ಅಷ್ಟರಲ್ಲಾಗಲೇ ದಾರಿಹೋಕರು ಪೊಲೀಸರಿಗೆ ಕರೆ ಮಾಡಿದ್ದಲ್ಲದೇ ಆತನನ್ನು ಹಿಡಿದುಕೊಂಡಿದ್ದಾರೆ. ಶ್ರೇಯಾ ನಾಯಕ್ ಒದೆಯಿಂದ ಹಣ್ಣುಗಾಯಿ ನೀರುಗಾಯಿ ಆಗಿದ್ದ ಆತನನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೇಯಾ ತೋರಿದ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಕ್ಷಯ್ ಕುಮಾರ್, ಎಲ್ಲ ಮಹಿಳೆಯರೂ ಸ್ವಯಂ ರಕ್ಷಣೆಯ ತರಬೇತಿ ಪಡೆದುಕೊಳ್ಳುವುದು ಸೂಕ್ತ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...