alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ನಲ್ಲಿ ನಕಲಿ ನೋಟು ಬಂದ ವೇಳೆ ಏನು ಮಾಡಬೇಕು..?

money 98746ದೇಶದಲ್ಲಿ ನಕಲಿ ನೋಟುಗಳ ಚಲಾವಣೆ ವ್ಯಾಪಕವಾಗುತ್ತಿದೆ. ಸಾಲದ್ದಕ್ಕೆ ಬ್ಯಾಂಕ್ ಎಟಿಎಂ ಗಳಲ್ಲಿ ಕೂಡಾ ಕೆಲವೊಮ್ಮೆ ನಕಲಿ ನೋಟುಗಳು ಗ್ರಾಹಕರ ಕೈ ಸೇರುತ್ತಿವೆ. ಇಂತಹ ಸಂದರ್ಭಗಳಲ್ಲಿ ಅದನ್ನು ಮತ್ತೊಬ್ಬರಿಗೆ ವರ್ಗಾಯಿಸಿ ಕೈ ತೊಳೆದುಕೊಳ್ಳಲು ಮುಂದಾಗುವವರೇ ಹೆಚ್ಚು. ಆದರೆ ಇದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯೂ ಇರುತ್ತದೆ. ಹಾಗಾದರೆ ಎಟಿಎಂ ಗಳಲ್ಲಿ ನಕಲಿ ನೋಟು ಬಂದರೆ ಏನು ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಗ್ರಾಹಕರು ಎಟಿಎಂ ನಿಂದ ಹಣ ಪಡೆದ ವೇಳೆ ನೋಟುಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು. ಒಂದು ವೇಳೆ ನಕಲಿ ನೋಟು ಬಂದಿರುವುದು ಕಂಡು ಬಂದಲ್ಲಿ ಕೂಡಲೇ ಎಟಿಎಂ ಗಾರ್ಡ್ ಗಮನಕ್ಕೆ ಇದನ್ನು ತರಬೇಕಲ್ಲದೇ ಅವರ ಬಳಿ ಇರುವ ರಿಜಿಸ್ಟರ್ ನಲ್ಲಿ ನಕಲಿ ನೋಟಿನ ಸೀರಿಯಲ್ ನಂಬರ್ ಸಮೇತ ನಮೂದಿಸಬೇಕು. ಜೊತೆಗೆ ಎಟಿಎಂ ರಶೀದಿಯಲ್ಲಿನ ವಹಿವಾಟು ಸಂಖ್ಯೆಯನ್ನೂ ಬರೆಯಬೇಕು. ಅಲ್ಲದೇ ಬರೆದ ವಿವರವನ್ನು ಮೊಬೈಲ್ ನಲ್ಲಿ ಫೋಟೋ ತೆಗೆದುಕೊಳ್ಳಬೇಕು. ಬಳಿಕ ಸಂಬಂಧಪಟ್ಟ ಬ್ಯಾಂಕ್ ಗಮನಕ್ಕೆ ತಂದು ಆ ನೋಟನ್ನು ನೀಡಿ ಅದಕ್ಕೆ ಪ್ರತಿಯಾಗಿ ಅಸಲಿ ನೋಟನ್ನು ಪಡೆಯಬಹುದು.

ಒಂದು ವೇಳೆ ಬ್ಯಾಂಕ್ ನವರು ಈ ಕುರಿತು ನಿರ್ಲಕ್ಷ್ಯ ವಹಿಸಿದರೆ ನೇರವಾಗಿ ಈ ಕುರಿತು ರಿಸರ್ವ್ ಬ್ಯಾಂಕ್ ಗೆ ಇ ಮೇಲ್ ಮೂಲಕ ಗಮನಕ್ಕೆ ತರಬಹುದು. ಜೊತೆಗೆ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಬಹುದು. 1000 ಹಾಗೂ 500 ರೂ. ಮುಖ ಬೆಲೆಯ ನಕಲಿ ನೋಟುಗಳು ಚಲಾವಣೆಯಲ್ಲಿರುವ ಕಾರಣ ಎಟಿಎಂ ನಲ್ಲಿ ಡ್ರಾ ಮಾಡಿದ ವೇಳೆ ಈ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಸೂಕ್ತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...