alex Certify
ಕನ್ನಡ ದುನಿಯಾ       Mobile App
       

Kannada Duniya

50 ಲಕ್ಷ ಕಪ್ಪುಹಣ ಬಚಾವ್ ಮಾಡಿಕೊಳ್ತಾರಾ ಎಂಜಿನಿಯರ್..?

engineer

ಎಂಜಿನಿಯರ್ ಅಂದು ಸಂಜೆ ಧ್ಯಾನಕ್ಕೆ ಕುಳಿತಿದ್ರು. ಆಗ ಕರೆಮಾಡಿದ ಸ್ನೇಹಿತನೊಬ್ಬ ಟಿವಿ ನೋಡುವಂತೆ ಹೇಳಿದ್ದ. ಕಪ್ಪುಹಣ ನಿಯಂತ್ರಣದ ಬಗ್ಗೆ ಮಾತನಾಡುತ್ತ ಮೋದಿ ನೋಟು ನಿಷೇಧದ ಬಾಂಬ್ ಸಿಡಿಸಿದ್ರು.

ಎಂಜಿನಿಯರ್ ಮಲಗುವ ಕೋಣೆಯ ಸ್ಟೀಲ್ ಟ್ರಂಕ್ ನಲ್ಲಿದ್ದ 48 ಲಕ್ಷ ರೂಪಾಯಿ ಕೂಡ ಕಪ್ಪುಹಣದ ಪಟ್ಟಿಗೆ ಸೇರಿಬಿಟ್ಟಿತ್ತು. ಉತ್ತರಪ್ರದೇಶದಲ್ಲಿ ಸರ್ಕಾರಿ ಎಂಜಿನಿಯರ್ ಆಗಿರೋ ಅವರಿಗೆ ಆರಂಭದಲ್ಲಿ ಈ ಸುದ್ದಿ ಕೇಳಿ ಶಾಕ್ ಆಗಿತ್ತು. ಯಾಕಂದ್ರೆ ಎಲ್ಲರಂತೆ ಅವರು ಕೂಡ ಲಂಚ ಪಡೆದು ಲಕ್ಷಾಂತರ ರೂಪಾಯಿ ಕೂಡಿಟ್ಟಿದ್ರು. ಮೇಲಧಿಕಾರಿಗಳ ಒತ್ತಡದಿಂದಾಗಿ ಲಂಚ ಪಡೆಯೋದು ಅನಿವಾರ್ಯ ಎನ್ನುತ್ತಾರೆ ಅವರು.

ಪ್ರತಿ ಹಬ್ಬದಲ್ಲೂ ಮೇಲಧಿಕಾರಿಗಳಿಗೆ ಇವರೆಲ್ಲ ದುಬಾರಿ ಗಿಫ್ಟ್ ಕೊಡಬೇಕು, ವಾಚ್, ಚಿನ್ನದ ಪೆಂಡೆಂಟ್ ಏನಾದ್ರೂ ಸರಿ. ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ ಅವರ ಮಕ್ಕಳಿಗೂ ಉಡುಗೊರೆ ಕೊಡದೇ ಇದ್ರೆ ಕೆಲಸಕ್ಕೆ ಸಂಚಕಾರ ಬರುತ್ತೆ. ನಮ್ಮ ಸಂಬಳದಿಂದ ಅದನ್ನೆಲ್ಲ ಮಾಡಲು ಸಾಧ್ಯವಿಲ್ಲ, ಹಾಗಾಗಿ ಲಂಚಕ್ಕೆ ಕೈಯ್ಯೊಡ್ಡುವುದು ಅನಿವಾರ್ಯ ಎನ್ನುತ್ತಾರೆ ಅವರು.

ಬೇರೆಯವರಿಗೆ ಹೋಲಿಸಿದ್ರೆ ನನ್ನ ಬಳಿಯಿರೋ ಹಣವೆಲ್ಲ ಲೆಕ್ಕಕ್ಕೇ ಇಲ್ಲ ಅನ್ನೋದು ಎಂಜಿನಿಯರ್ ಸಾಹೇಬರ ಮಾತು. ರಾಜಕಾರಣಿಗಳು, ಶಾಸಕರೆಲ್ಲ ತಮ್ಮ ಭ್ರಷ್ಟಾಚಾರದ ಸ್ಕೀಮನ್ನು ರಹಸ್ಯವಾಗಿಡ್ತಾರೆ, ನಮ್ಮಂಥವರು ಮಾತ್ರ ಸಿಕ್ಕಿಬೀಳ್ತೀವಿ ಅಂತಾ ಅಳಲು ತೋಡಿಕೊಂಡಿದ್ದಾರೆ. ತಮ್ಮ ಬಳಿ 48 ಲಕ್ಷ ರೂಪಾಯಿ ಕಪ್ಪುಹಣ ಇರೋದನ್ನು ಒಪ್ಪಿಕೊಂಡಿರುವ ಎಂಜಿನಿಯರ್, ಅದನ್ನು ಹೇಗೆ ಉಳಿಸಿಕೊಳ್ತಾರೆ ಅನ್ನೋದನ್ನು ಮಾತ್ರ ಹೇಳಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...