alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆಯಿಂದ ಅಳಿಯನಿಗೆ ಸಾರಾಯಿ ಸೇವೆ..!

bega-1468783052‘ಸರ್ವ ರೋಗಕ್ಕೆ ಸಾರಾಯಿ ಮದ್ದು’ ಎಂಬುದನ್ನು ಇವರು ‘ಸರ್ವ ಕಾರ್ಯಕ್ಕೆ ಸಾರಾಯಿ’ ಎಂದು ತಿದ್ದುಪಡಿ ಮಾಡಿಕೊಂಡಿರಬೇಕು. ಏಕೆಂದರೆ ಮಧ್ಯಪ್ರದೇಶದ ಬೈಗಾ ಆದಿವಾಸಿಗಳಿಗೆ ಸಾರಾಯಿಯೇ ಎಲ್ಲ. ಇವರು ಮದುವೆ ಅಥವಾ ಯಾವುದೇ ಶುಭಕಾರ್ಯವನ್ನು ಆರಂಭಿಸುವುದು ಸಾರಾಯಿಯಿಂದಲೇ.

ಮದುವೆಯ ದಿನ ಮಧುಮಗ ಬಂದ ನಂತರ ಅತ್ತೆ, ಭಾವೀ ಅಳಿಯನಿಗೆ ಸಾರಾಯಿಯನ್ನು ಕುಡಿಸುವ ಪದ್ಧತಿ ಬೈಗಾ ಆದಿವಾಸಿಗಳಲ್ಲಿದೆ. ನಂತರ ಮಧುಮಗ, ಮಧುಮಗಳು ಪರಸ್ಪರ ಸಾರಾಯಿ ವಿನಿಮಯ ಮಾಡಿಕೊಳ್ಳುತ್ತಾರಂತೆ. ಬೈಗಾ ಆದಿವಾಸಿಗಳಲ್ಲಿ ಗಂಡು- ಹೆಣ್ಣು ಬೇಧವಿಲ್ಲದೆ ಎಲ್ಲರೂ ಸಾರಾಯಿ ಕುಡಿಯುತ್ತಾರೆ.

ಇವರು ಮದುವೆಗಾಗಿ ಹೆಚ್ಚಿನ ತಯಾರಿ ನಡೆಸುವುದಿಲ್ಲ. ಚಪ್ಪರ ಛಾವಣಿಗಳೆಲ್ಲವೂ ಪರಿಸರ ಸ್ನೇಹಿಯಾಗಿರುತ್ತವೆ. ಸುತ್ತಮುತ್ತ ಸಿಗುವ ಎಲೆ, ಟೊಂಗೆಗಳಿಂದಲೇ ಚಪ್ಪರ ನಿರ್ಮಿಸುತ್ತಾರೆ. ದಿಬ್ಬಣ ಕೂಡ ಕಾಲ್ನಡಿಗೆಯಲ್ಲೇ ಹೊರಡುತ್ತದೆ. ಬೈಗಾ ಜನಾಂಗದವರ ಇನ್ನೊಂದು ವಿಶೇಷತೆ ಏನೆಂದರೆ ಇವರ ಮದುವೆಯಲ್ಲಿ ಪಂಡಿತರು ಇರುವುದಿಲ್ಲ. ಒಟ್ಟಿನಲ್ಲಿ ಇವರಿಗೆ ಮದುವೆಯೆಂದರೆ ಸಾರಾಯಿ ಕುಡಿಯುವುದೇ ದೊಡ್ಡ ಮೋಜು. ಅದಕ್ಕಾಗಿಯೇ ಹೆಚ್ಚಿನ ಖರ್ಚು ಮಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...