alex Certify
ಕನ್ನಡ ದುನಿಯಾ       Mobile App
       

Kannada Duniya

ಏನೋ ಮಾಡಲು ಹೋಗಿ ಯಡವಟ್ಟಾಯ್ತೀಗ !

cri mum

ಮುಂಬೈ: ಮನೆಯಲ್ಲಿ ಪತ್ನಿ ಹಾಗೂ ಅತ್ತೆಗೆ ಬುದ್ಧಿಕಲಿಸಲು ಹೋದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ನವೀ ಮುಂಬೈನಲ್ಲಿ ನಡೆದಿದೆ. 33 ವರ್ಷದ ಅಮಯ್ ಶೇಟ್ ಎಂಬಾತನೇ ಪೊಲೀಸರ ಅತಿಥಿಯಾದವ. ಏನೋ ಮಾಡಲು ಹೋಗಿ ಮತ್ತೇನೋ ಮಾಡಿಕೊಂಡ ಎನ್ನುವಂತಾಗಿದೆ ಈತನ ಪರಿಸ್ಥಿತಿ.

ಪತ್ನಿ ಶೀತಲ್, ಆಕೆಯ ತಾಯಿ ಹಂಸಾ ಪಾರ್ಮರ್ ಅವರಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿದ ಅಮಯ್ ಯಡವಟ್ಟು ಮಾಡಿಕೊಂಡಿದ್ದಾನೆ. ಹಂಸಾ ಅವರು ತಮ್ಮ ಆಸ್ತಿಯನ್ನು ಮಾರಿ ಅದರಿಂದ ಬಂದ 42 ಲಕ್ಷ ರೂ. ಹಣ ಹಾಗೂ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದು ಅಳಿಯನ ಮನೆಯಲ್ಲಿಟ್ಟಿದ್ದರು. ಹಂಸಾ ಬೇರೆ ಪ್ರಾಪರ್ಟಿಯೊಂದನ್ನು ಖರೀದಿಸಲು ಮುಂದಾಗಿದ್ದು, ಅದನ್ನು ನೋಡಲು ಮಗಳು ಶೀತಲ್ ಳನ್ನು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಹಣ, ಒಡವೆ ಕಳುವಾಗಿತ್ತು.

ನವೀ ಮುಂಬೈ ಪೊಲೀಸರಿಗೆ ದೂರು ನೀಡಲಾಗಿತ್ತು. ಕೇಸು ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದಾಗ ಅಳಿಯನೇ ಹಣ ದೋಚಿರುವುದು ಗೊತ್ತಾಗಿದೆ. ಅಮಯ್ ಶೇಟ್ ಹಣ ದೋಚಿ ಸ್ನೇಹಿತನ ಮನೆಯ ಕಾರ್ ನಲ್ಲಿ ಇಟ್ಟಿದ್ದ. ಆತ ಉನ್ನತ ಉದ್ಯೋಗದಲ್ಲಿದ್ದು, ಕೈತುಂಬ ಸಂಬಳ ಕೂಡ ಬರುತ್ತದೆ. ಹಣದ ಅವಶ್ಯಕತೆ ಇಲ್ಲ. ಅತ್ತೆ, ಪತ್ನಿಗೆ ಬುದ್ಧಿಕಲಿಸಲು ಹೀಗೆ ಮಾಡಿದೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...