alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಜಿಟಲ್ ಪೇಮೆಂಟ್ ಬಗ್ಗೆ ಅರಿವು ಮೂಡಿಸಲು ಬರ್ತಿದೆ ಸಹಾಯವಾಣಿ

smartphone-generic-istock_650x400_41479989358

ಕೈಯಲ್ಲಿ ಕಾಸಿಲ್ಲ, ಡಿಜಿಟಲ್ ಪೇಮೆಂಟ್ ಬಗ್ಗೆ ಗೊತ್ತಿಲ್ಲ ಅನ್ನೋ ಪರಿಸ್ಥಿತಿ ಅದೆಷ್ಟೋ ಜನರದ್ದು. ಟಿವಿ ವಾಹಿನಿ ಮತ್ತು ವೆಬ್ ಸೈಟ್ ಮೂಲಕ ಈ ಬಗ್ಗೆ ಜನರಿಗೆ ತಿಳಿಹೇಳಲು ಸರ್ಕಾರ ಪ್ರಯತ್ನಿಸುತ್ತಿದೆ. ಇದರ ಜೊತೆಜೊತೆಗೆ ಡಿಜಿಟಲ್ ಪೇಮೆಂಟ್ ಗಾಗಿ ಜನರಿಗೆ ನೆರವಾಗಲು ಸಹಾಯವಾಣಿ ಒಂದನ್ನು ಆರಂಭಿಸ್ತಾ ಇದೆ.

ಡಿಜಿಟಲ್ ಪೇಮೆಂಟ್ ಬಗ್ಗೆ ನಿಮಗೆ ಯಾವುದೇ ರೀತಿಯ ಅನುಮಾನಗಳಿದ್ರೆ, ಮಾಹಿತಿ ಬೇಕಿದ್ರೆ ನೀವು 14444 ಟೋಲ್ ಫ್ರೀ ನಂಬರ್ ಗೆ ಕರೆ ಮಾಡಬಹುದು. ಸದ್ಯದಲ್ಲೇ ಇದು ಅಸ್ತಿತ್ವಕ್ಕೆ ಬರಲಿದೆ.

ಇದಕ್ಕಾಗಿ ಸರ್ಕಾರ, ನ್ಯಾಸ್ಕಾಮ್ ನೆರವು ಪಡೆಯುತ್ತಿದೆ. ಜನರಿಗೆ ಅಗತ್ಯ ಮಾಹಿತಿ ನೀಡಲು ಕಾಲ್ ಸೆಂಟರ್ ವ್ಯವಸ್ಥೆ ಮಾಡಲಾಗ್ತಿದೆ. ಜನರ ಬಳಿ ಆಧಾರ್ ಸಂಖ್ಯೆ ಇದೆಯಾ, ಬ್ಯಾಂಕ್ ಖಾತೆ ಹೊಂದಿದ್ದಾರಾ, ಯಾವ ರೀತಿಯ ಮೊಬೈಲ್ ಇದೆ? ಅನ್ನೋದಕ್ಕೆ ಅನುಗುಣವಾಗಿ ಅಪ್ ಟು ಡೇಟ್ ಮಾಹಿತಿ ನೀಡಲಾಗುತ್ತದೆ. ಅಷ್ಟೇ ಅಲ್ಲ ಡಿಜಿಟಲ್ ವಹಿವಾಟಿನ ಬಗ್ಗೆ ಜನರನ್ನು ಸುಶಿಕ್ಷಿತರನ್ನಾಗಿ ಮಾಡಲು ಮಾಹಿತಿ ತಂತ್ರಜ್ಞಾನ ಸಚಿವಾಲಯ ‘ಡಿಜಿ ಶಾಲಾ’ ಎಂಬ ಫ್ರೀ-ಟು-ಏರ್ ಚಾನೆಲ್ ಒಂದನ್ನು ಆರಂಭಿಸಿದೆ. ಅದು ದೂರದರ್ಶನದ ಡಿಟಿಎಚ್ ವೇದಿಕೆಯಲ್ಲಿ ಲಭ್ಯವಿದೆ. ಕ್ಯಾಶ್ ಲೆಸ್ ಇಂಡಿಯಾ ವೆಬ್ ಸೈಟ್ ಕೂಡ ಜನರಿಗೆ ಎಲೆಕ್ಟ್ರಾನಿಕ್ ಪೇಮೆಂಟ್ ಬಗ್ಗೆ ಅಗತ್ಯ ಮಾಹಿತಿ ನೀಡುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...