alex Certify
ಕನ್ನಡ ದುನಿಯಾ       Mobile App
       

Kannada Duniya

ಪಕೋಡಾ ಸ್ಟಾಲ್ ತೆರೆಯಲು ಸಾಲ ಕೇಳಿದ ನಿರುದ್ಯೋಗಿ

ಉತ್ತರ ಪ್ರದೇಶದ ನಿರುದ್ಯೋಗಿ ಯುವಕನೊಬ್ಬ ಪಕೋಡಾ ಅಂಗಡಿ ತೆರೆಯಲು ಸಹಾಯ ಮಾಡುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಸಚಿವ ಮೊಹ್ಸಿನ್ ರಾಜಾ ಅವರಿಗೆ ಪತ್ರ ಬರೆದಿದ್ದಾನೆ. ಪಕೋಡಾ ಮಳಿಗೆ ತೆರೆಯಲು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಕೊಡಿಸುವಂತೆ ಅಶ್ವಿನ್ ಮಿಶ್ರಾ ಮನವಿ ಮಾಡಿದ್ದಾನೆ.

ಖಾಸಗಿ ವಾಹಿನಿಯಲ್ಲಿ ಸಂದರ್ಶನದ ವೇಳೆ ಪಕೋಡಾ ಬ್ಯುಸಿನೆಸ್ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ರು. ಅದನ್ನು ಕೇಳಿದ ಅಶ್ವಿನ್ ಗೆ ತಾನೂ ಪಕೋಡಾ ಅಂಗಡಿ ತೆರೆಯಬೇಕು ಅನ್ನೋ ಆಲೋಚನೆ ಬಂದಿತ್ತಂತೆ. ಆದ್ರೆ ಅದಕ್ಕೆ ಬೇಕಾದ ಬಂಡವಾಳ ಅಶ್ವಿನ್ ಬಳಿಯಿಲ್ಲ.

ಬ್ಯಾಂಕ್ ಗಳು ಕೂಡ ಸಾಲ ಕೊಡಲು ಒಪ್ಪಿಲ್ಲ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿ 10 ಕೋಟಿ ಭಾರತೀಯರಿಗೆ ಸಾಲ ಸಿಗಲಿದೆ ಅಂತಾ ಮೋದಿ ಹೇಳಿದ್ದರು. ಆದ್ರೆ ಬ್ಯಾಂಕ್ ಗಳು ಸಾಲ ಕೊಡಲು ಒಪ್ಪುತ್ತಿಲ್ಲ ಅಂತಾ ಪತ್ರದಲ್ಲಿ ಅಶ್ವಿನ್ ಉಲ್ಲೇಖಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...