alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಮಳೆಗೆ ತತ್ತರಿಸಿ ಹೋಗಿದೆ ಆಂಧ್ರ- ತೆಲಂಗಾಣ

big_432499_1474717548

ಆಂಧ್ರಪ್ರದೇಶ ಹಾಗೂ ತೆಲಂಗಾಣ ಪ್ರದೇಶಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈವರೆಗೆ ಒಟ್ಟು 17 ಮಂದಿ ಮಳೆಗೆ ಬಲಿಯಾಗಿದ್ದಾರೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರವಾಹಕ್ಕೆ ಸಿಲುಕಿರುವವರ ರಕ್ಷಣೆ ಭರದಿಂದ ಸಾಗಿದೆ. ಹೈದ್ರಾಬಾದ್ ಹಾಗೂ ರಂಗ ರೆಡ್ಡಿ ಜಿಲ್ಲೆಗಳಲ್ಲಿ ಮಿಟಿಟರಿ ಪಡೆ ರಕ್ಷಣಾ ಕಾರ್ಯಕ್ಕಿಳಿದಿದೆ. ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಭಾರೀ ಮಳೆಗೆ ಮೂರು ಕಾರ್ಖಾನೆಗಳ ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 8 ಕ್ಕೇರಿದೆ.ಇಂದು ಬೆಳಿಗ್ಗೆ ಮತ್ತೆ ಮೂರು ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ ಭಾರತೀಯ ವಾಯುಸೇನೆಯ ಮೂರು ಚೇತಕ್ ಹೆಲಿಕಾಪ್ಟರ್ ಗಳು ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಗ್ತಾ ಇತ್ತು. ಆದ್ರೆ ಭಾರೀ ಮಳೆ ಹೆಲಿಕಾಪ್ಟರ್ ರಕ್ಷಣೆಗೆ ಅಡ್ಡಿಯುಂಟು ಮಾಡಿದೆ. ಹೈದ್ರಾಬಾದ್ ನ ತಗ್ಗು ಪ್ರದೇಶದ ಜನರು ನಗರದ ಸಂಪರ್ಕ ಕಳೆದುಕೊಂಡಿದ್ದು, ನೀರು, ಆಹಾರವಿಲ್ಲದೆ ಪರದಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...