alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ 11 ಗಂಟೆ ನಂತ್ರ ಸಂಚರಿಸುವ ಹಾಗಿಲ್ಲ ಭಾರೀ ವಾಹನ

ದೀಪಾವಳಿ ಸಂಭ್ರಮಾಚರಣೆಯ ಸೈಡ್ಇಫೆಕ್ಟ್ ರಾಷ್ಟ್ರ ರಾಜಧಾನಿಯಲ್ಲಿ ಕಾಣ್ತಿದೆ. ಬುಧವಾರ ರಾತ್ರಿ ಏಕಾಏಕಿ ಮಾಲಿನ್ಯದ ಮಟ್ಟ ಹೆಚ್ಚಾಗಿದ್ದು, ವಾತಾವರಣ ವಿಷವಾಗ್ತಿದೆ. ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಅತಿ ಬೇಗ ಇದ್ರ ಪರಿಣಾಮ ಕಾಣ್ತಿದೆ. ಜನರು ಮನೆಯಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ದೆಹಲಿ ಕಲುಷಿತ ವಾತಾವರಣ ಸುಧಾರಣೆಗೆ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗ್ತಿದೆ.

ನಾಲ್ಕು ದಿನಗಳ ಕಾಲ ಸರಕು ಸಾಗಣೆ ಟ್ರಕ್ ಗಳ ನಿಷೇಧ ಹೇರಲು ನಿರ್ಧರಿಸಲಾಗಿದೆ. ಗುರುವಾರ ರಾತ್ರಿ 11 ಗಂಟೆಯಿಂದ ಸರಕು ಸಾಗಿಸುವ ಮಧ್ಯಮ ಹಾಗೂ ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 11 ರವರೆಗೆ ಈ ನಿಮಯ ಜಾರಿಯಲ್ಲಿರಲಿದೆ ಎನ್ನಲಾಗಿದೆ. ರಾತ್ರಿ 11 ಗಂಟೆ ನಂತ್ರ ಯಾವುದೇ ಭಾರಿ ವಾಹನ ಸಂಚರಿಸುವುದಿಲ್ಲ. ಅಗತ್ಯ ವಸ್ತುಗಳ ಸಾಗಣೆ ವಾಹನಗಳನ್ನು ಈ ನಿರ್ಬಂಧದಿಂದ ಹೊರಗಿಡಲಾಗಿದೆ.

ದೆಹಲಿಯ ಎಲ್ಲ ಸ್ಥಳಗಳ ಪರಿಸ್ಥಿತಿ ಒಂದೇ ರೀತಿಯಿದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಪಾಲಿಸಲಾಗ್ತಿದೆ. ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ವಾಯ ಗುಣಮಟ್ಟವನ್ನು ದಾಖಲಿಸದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...