alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಠಪೂರ್ತಿ ಕುಡಿದಿದ್ದ ಡಿಸಿಎಂ ಪುತ್ರನಿಗೆ ಮುಖಭಂಗ

qatar-airways_650x400_61453963735

ಕಂಠಪೂರ್ತಿ ಕುಡಿದು ಬಂದಿದ್ದ ಗುಜರಾತ್ ಉಪಮುಖ್ಯಮಂತ್ರಿಗಳ ಪುತ್ರನಿಗೆ ವಿಮಾನ ಏರಲು ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ. ಡಿಸಿಎಂ ಪುತ್ರ ಜೈಮನ್ ಪಟೇಲ್, ಆತನ ಪತ್ನಿ ಜಲಕ್ ಹಾಗೂ ಪುತ್ರಿ ವೈಷ್ಣವಿ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಬೆಳಗ್ಗೆ 4 ಗಂಟೆಗೆ ಕತಾರ್ ಏರ್ವೇಸ್ ವಿಮಾನದ ಮೂಲಕ ಅವರು ಗ್ರೀಸ್ ಗೆ ಪ್ರಯಾಣಿಸುವವರಿದ್ದರು.

ಲ್ಯಾಂಡ್ ಡೀಲರ್ ಆಗಿರೋ ಜೈಮನ್ ಪಟೇಲ್ ಕಂಠಪೂರ್ತಿ ಕುಡಿದು ಏರ್ಪೋರ್ಟ್ ಗೆ ಬಂದಿದ್ದ. ಸರಿಯಾಗಿ ನಿಲ್ಲಲು ಕೂಡ ಆತನಿಂದ ಸಾಧ್ಯವಾಗುತ್ತಿರಲಿಲ್ಲ. ಇಮಿಗ್ರೇಶನ್ ಪ್ರಕ್ರಿಯೆ, ಚೆಕ್ ಇನ್ ಎಲ್ಲಾ ಮುಗಿಸಿ ವಿಮಾನ ಏರಲು ಮುಂದಾಗಿದ್ದಾನೆ. ಆತನ ಸ್ಥಿತಿ ಗಮನಿಸಿದ ಸಿಬ್ಬಂದಿ ವಿಮಾನ ಏರಲು ಅವಕಾಶ ನೀಡಿಲ್ಲ. ಈ ವೇಳೆ ಜೈಮನ್ ಪಟೇಲ್, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾನೆ.

ನಂತರ ಜೈಮನ್ ಪಟೇಲ್, ಮಡದಿ ಮತ್ತು ಮಗಳ ಜೊತೆಗೆ ಮನೆಗೆ ವಾಪಸ್ಸಾದ್ರು. ತಮ್ಮ ಪುತ್ರ ಕುಡಿದಿರಲಿಲ್ಲ, ಆತನ ಆರೋಗ್ಯ ಏರುಪೇರಾಗಿತ್ತು. ವಿಪಕ್ಷದವರು ತಮ್ಮ ಇಮೇಜ್ ಗೆ ಧಕ್ಕೆ ತರಲು ವೃಥಾ ಆರೋಪ ಮಾಡುತ್ತಿದ್ದಾರೆಂದು ಗುಜರಾತ್ ಉಪಮುಖ್ಯಮಂತ್ರಿ ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...