alex Certify
ಕನ್ನಡ ದುನಿಯಾ       Mobile App
       

Kannada Duniya

ಚೆನ್ನೈ ವ್ಯಕ್ತಿಗೆ ಮರುಜೀವ ಕೊಟ್ಟಿದೆ ಸೈನಿಕನ ಹೃದಯ

heart

ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡ್ತಾರೆ. ಜನರ ಹಿತಕ್ಕಾಗಿ ಪ್ರಾಣ ಅರ್ಪಿಸ್ತಾರೆ. ದೆಹಲಿಯ ಸೈನಿಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಆ ಯೋಧನ ಹೃದಯವೀಗ ಚೆನ್ನೈ ವ್ಯಕ್ತಿಯೊಬ್ಬನ ದೇಹದಲ್ಲಿ ಲಬ್ ಡಬ್ ಅಂತಾ ಹೊಡೆದುಕೊಳ್ತಿದೆ.

ಅನಾರೋಗ್ಯಪೀಡಿತ ಯುವ ಸೈನಿಕನ ಹೃದಯವನ್ನು ಚೆನ್ನೈ ವ್ಯಕ್ತಿಯೊಬ್ಬನಿಗೆ ಅಳವಡಿಸಲಾಗಿದೆ. ದೆಹಲಿಯಿಂದ ವಿಮಾನದ ಮೂಲಕ ಜೀವಂತ ಹೃದಯವನ್ನು ಚೆನ್ನೈಗೆ ತಂದು ಕಸಿ ಮಾಡಲಾಗಿದೆ. 3.15 ನಿಮಿಷಕ್ಕೆ ಸರಿಯಾಗಿ ಹೃದಯವನ್ನು ಸೈನಿಕನಿಂದ ಬೇರ್ಪಡಿಸಲಾಯ್ತು. ನಂತರ ಮಿಲಿಟರಿ ಆಂಬ್ಯುಲೆನ್ಸ್ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ತರಲಾಯ್ತು. ಅಲ್ಲಿಂದ ಖಾಸಗಿ ವಿಮಾನದಲ್ಲಿ ಹೃದಯವನ್ನು ತಂದು ಚೆನ್ನೈನ ಪ್ರೈವೇಟ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ದೆಹಲಿಯಿಂದ ವಿಮಾನ ಚೆನ್ನೈ ತಲುಪಲು 2 ಗಂಟೆ 50 ನಿಮಿಷಗಳಷ್ಟು ಸಮಯ ಬೇಕಾಯ್ತು. ಅಲ್ಲಿಂದ ಹೃದಯವನ್ನು ಆಸ್ಪತ್ರೆ ತಲುಪಿಸಲು ಮತ್ತೆ 20 ನಿಮಿಷವಾಗಿದೆ. ಅಷ್ಟೊತ್ತಿಗಾಗಲೇ ಸರ್ಜರಿಗೆ ಸಿದ್ಧತೆ ಮಾಡಿಕೊಂಡಿದ್ದ ವೈದ್ಯರು, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಹೃದಯಾಘಾತಕ್ಕೊಳಗಾಗಿ ಸಾವಿನಂಚು ತಲುಪಿದ್ದ ವೃದ್ಧನೊಬ್ಬನಿಗೆ ಸೈನಿಕನ ಹೃದಯವನ್ನು ಕಸಿ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...