alex Certify
ಕನ್ನಡ ದುನಿಯಾ       Mobile App
       

Kannada Duniya

4 ತಾಸಲ್ಲಿ 23 ಬಾರಿ ಹಾರ್ಟ್ ಅಟ್ಯಾಕ್ !

heart_Disease

ಆಧುನಿಕ ಜೀವನಶೈಲಿಯಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಚಿಕ್ಕವಯಸ್ಸಿನಲ್ಲಿಯೇ ಹಲವಾರು ಕಾಯಿಲೆಗಳು ಆವರಿಸುತ್ತವೆ. ಕಾಯಿಲೆಗಳೆಲ್ಲಾ ಸಾಮಾನ್ಯವಾಗಿದ್ದು, ಜನ ಯಾವಾಗಲೂ ಆಸ್ಪತ್ರೆಗೆ ಎಡತಾಕುತ್ತಿರುತ್ತಾರೆ.

ಇದೆಲ್ಲಾ ಏಕೆಂದರೆ ನಂಬಲು ಸಾಧ್ಯವಾಗದ ಘಟನೆಯೊಂದು ಕೊಚ್ಚಿಯಲ್ಲಿ ನಡೆದಿದೆ. ಕೊಚ್ಚಿಯ 60 ವರ್ಷದ ವ್ಯಕ್ತಿಯೊಬ್ಬರು ಕೇವಲ ನಾಲ್ಕೇ ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 23 ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಆದರೂ ವೈದ್ಯರ ಸಕಾಲಿಕ ಪ್ರಯತ್ನದಿಂದ ಅವರು ಬದುಕಿದ್ದಾರೆ. ಧೂಮಪಾನಿಯಾಗಿದ್ದ ಆ ವ್ಯಕ್ತಿ ಮೊಮ್ಮಗನೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರಿಗೆ ಹೃದಯಾಘಾತವಾಗಿರುವುದು ಗೊತ್ತಾಗಿ ಚಿಕಿತ್ಸೆ ನೀಡಿದ್ದಾರೆ.

ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿಯೇ ಅವರಿಗೆ ಮತ್ತೆ ಮತ್ತೆ ಹೃದಯಾಘಾತವಾಗಿದ್ದರಿಂದ ಆಸ್ಟರ್ ಮೆಡಿಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೃದ್ರೋಗ ತಜ್ಞ ಡಾ. ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದೆ. ಅವರಿಗೆ 4 ಗಂಟೆಗಳ ಅವಧಿಯಲ್ಲಿ 23 ಸಲ ಹೃದಯಾಘಾತವಾಗಿದ್ದರಿಂದ ಕ್ಲಿಷ್ಟಕರ ಸ್ಥಿತಿಯಲ್ಲಿಯೂ ಅವರ ಹೃದಯದ ಕ್ರಿಯೆಯನ್ನು ಚಾಲನೆಯಲ್ಲಿಟ್ಟು, ಸ್ಟೆಂಟಿಂಗ್ ಮೂಲಕ ಬ್ಲಾಕ್ ಕ್ಲಿಯರ್ ಮಾಡಲಾಗಿದೆ. ಅವರೀಗ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ರೀತಿ ನಿರಂತರ ಹೃದಯಾಘಾತವಾಗುವುದು ಅಪರೂಪಗಳಲ್ಲಿ ಅಪರೂಪ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...