alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಗ್ಯ ಸಚಿವರ ಡರ್ಟಿ ಪಿಕ್ಚರ್ ವೈರಲ್…?

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದೆ. ಎಲ್ಲ ರಾಜ್ಯಗಳಲ್ಲೂ ಸ್ವಚ್ಛ ಭಾರತ ಅಭಿಯಾನಕ್ಕೆ ಮಹತ್ವ ನೀಡಲಾಗ್ತಿದೆ. ಸ್ವಚ್ಛತೆ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ನಾಯಕರೇ ಸ್ವಚ್ಛತೆ ಮರೆತಿದ್ದಾರೆ. ಇದಕ್ಕೆ ರಾಜಸ್ತಾನದ ಮಂತ್ರಿ ಉತ್ತಮ ಉದಾಹರಣೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಆ ಫೋಟೋದಲ್ಲಿರುವ ವ್ಯಕ್ತಿ ರಾಜಸ್ತಾನದ ಆರೋಗ್ಯ ಸಚಿವರು ಎಂದು ಫೋಟೋ ಪೋಸ್ಟ್ ಮಾಡಿದ ವ್ಯಕ್ತಿಯ ವಾದವಾಗಿದೆ. ಫೋಟೋದಲ್ಲಿರುವ ಮಂತ್ರಿ ಕಾಲಿಚರಣ್ ಸರಾಫ್ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡ್ತಿದ್ದಾರೆ. ಅವ್ರ ಪಕ್ಕದಲ್ಲಿಯೇ ಸರ್ಕಾರಿ ಕಾರ್ ಕಾಣ್ತಿದೆ. ಸಹಾಯಕ ಕೂಡ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.

ಈ ಫೋಟೋದಲ್ಲಿರುವ ವ್ಯಕ್ತಿ ಸಚಿವರೇ ಎಂಬುದು ದೃಢಪಟ್ಟಿಲ್ಲ. ಅಧಿಕಾರಿ ಮೂಲಗಳು ಫೋಟೋದಲ್ಲಿರುವ ವ್ಯಕ್ತಿ ಕಾಲಿಚರಣ್ ಎಂದಿದ್ದಾರೆ. ಫೋಟೋ ದೂರದಿಂದ ತೆಗೆಯಲಾಗಿದ್ದು ಸಾಮಾಜಿಕ ಜಾಲತಾಣ ಬಳಕೆದಾರರು ಮೋದಿ ಯೋಜನೆ ಬಗ್ಗೆ ಹಾಸ್ಯ ಮಾಡಲು ಶುರುಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...