alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ: ಮನನೊಂದು ಸಾವಿಗೆ ಶರಣಾದ ಪತ್ನಿ-ತಾಯಿಯೂ….

ಬೆಂಗಳೂರು: ಅನಾರೋಗ್ಯಕ್ಕೆ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಹಿನ್ನಲೆಯಲ್ಲಿ ಮನನೊಂದ ಆತನ ಪತ್ನಿ ಹಾಗೂ ತಾಯಿ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

ಇಲ್ಲಿನ ಮುತ್ಯಾಲನಗರದಲ್ಲಿ ಈ ಘಟನೆ ನಡೆದಿದ್ದು, ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಶೇಷ ನಯನ, ಪತ್ನಿ ಉಷಾ ಮತ್ತು ತಾಯಿ ಸುಧಾ ಮೃತ ವ್ಯಕ್ತಿಗಳು.

ಯಶವಂತಪುರದ ಮುತ್ಯಾಲ ನಗರದಲ್ಲಿ ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದ ಶೇಷ ಕುಟುಂಬ, ಟೈಲರಿಂಗ್ ಮಾಡ್ತಾ ಜೀವನ ಸಾಗಿಸ್ತಿದ್ದರು. ಇತ್ತೀಚೆಗೆ ಶೇಷ ಶಯನ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆರೋಗ್ಯ ಸಮಸ್ಯೆಗೆ ಬೇಸತ್ತ ಶೇಷ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಇದರಿಂದ ಮನನೊಂದು ದಿಕ್ಕು ಕಾಣದ ಶೇಷ ಅವರ ಪತ್ನಿ ಹಾಗೂ ತಾಯಿ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...