alex Certify
ಕನ್ನಡ ದುನಿಯಾ       Mobile App
       

Kannada Duniya

”ಬ್ಲೂ ವೇಲ್ ಗೇಮ್ 4 ಹಂತವಾಗಿದ್ದು ಮುಂದೆ ಹೋಗ್ಬೇಕಾ ಬೇಡ್ವಾ”

ಒಡಿಶಾದ ವಿದ್ಯಾರ್ಥಿಯೊಬ್ಬ ಫೇಸ್ಬುಕ್ ಪುಟದಲ್ಲಿ ಬ್ಲೂ ವೇಲ್ ಗೇಮ್ ಬಗ್ಗೆ ಬರೆದುಕೊಂಡಿದ್ದಾನೆ. ಬ್ಲೂ ವೇಲ್ ಗೇಮ್ ಆಡ್ತಿದ್ದು, ಈಗ ನಾಲ್ಕನೇ ಹಂತದಲ್ಲಿದ್ದೇನೆ. ಮುಂದೆ ಗೇಮ್ ಮುಂದುವರೆಸಬೇಕಾ ಬೇಡ್ವಾ ಎಂಬ ಪ್ರಶ್ನೆಯಿಟ್ಟಿದ್ದಾನೆ ವಿದ್ಯಾರ್ಥಿ.

ಈತ ಒಡಿಶಾ ಬೆಹರಾಮ್ಪುರದ ಇಂಜಿನಿಯರಿಂಗ್ ವಿದ್ಯಾರ್ಥಿ. ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕುವ ಜೊತೆಗೆ ಫೋಟೋವೊಂದನ್ನು ಹಾಕಿದ್ದಾನೆ. ರಕ್ತದಿಂದ ಕೂಡಿದ ಕೈ ಫೋಟೋ ನೋಡಿದ ಸಂಬಂಧಿಕರು ಹಾಗೂ ಸ್ನೇಹಿತರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಸಾವಿನ ಬಾಯಿಗೆ ಹೋಗ್ತಿದ್ದವನನ್ನು ಉಳಿಸಿಕೊಳ್ಳಲಾಗಿದೆ. ಫೇಸ್ಬುಕ್ ನಲ್ಲಿ ಈತ ಬರೆದ ಫೋಸ್ಟ್ ಗೆ ಅನೇಕ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕರು ಮುಂದೆ ಆಡದಂತೆ ಮನವಿ ಮಾಡಿದ್ದಾರೆ. ಒಬ್ಬ ಸ್ನೇಹಿತ ಆಟ ಮುಂದುವರೆಸುವಂತೆ ಹೇಳಿದ್ದಾನೆ. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ಹೋಗಿದೆ.

ಒಡಿಶಾದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ಮಗನ ವರ್ತನೆ ನೋಡಿ ಅನುಮಾನಗೊಂಡ ಪಾಲಕರು ಮಗನ ಜೀವ ಉಳಿಸಿದ ಪ್ರಕರಣ ಬಹಿರಂಗವಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...