alex Certify
ಕನ್ನಡ ದುನಿಯಾ       Mobile App
       

Kannada Duniya

5 ಪೈಸೆಗಾಗಿ 40 ವರ್ಷಗಳಿಂದ ಕಾನೂನು ಹೋರಾಟ..!

bus-conductor_ranvir singh5, 10, 25 ಪೈಸೆ ನಾಣ್ಯಗಳು ಬೆಲೆ ಕಳೆದುಕೊಂಡು ಯಾವುದೋ ಕಾಲವಾಗಿದೆ. 50 ಪೈಸೆ ನಾಣ್ಯವೂ ಅದೇ ಹಾದಿಯಲ್ಲಿದೆ. ಆದರೆ 5 ಪೈಸೆಯ ವಿಚಾರವೊಂದು 40 ವರ್ಷಗಳ ಕಾನೂನು ಹೋರಾಟಕ್ಕೆ ಕಾರಣವಾಗಿದೆ ಎಂದರೆ ನೀವು ನಂಬಲೇಬೇಕು.

ಹೌದು, ಇಂತದೊಂದು ಪ್ರಕರಣ ನಡೆದಿರುವುದು ಸತ್ಯ. ದೆಹಲಿ ಸಾರಿಗೆ ನಿಗಮದಲ್ಲಿ ಕಂಡಕ್ಟರ್ ಆಗಿದ್ದ ರಣವೀರ್ ಸಿಂಗ್ ಯಾದವ್ 5 ಪೈಸೆ ದುರುಪಯೋಗಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷಗಳಿಂದಲೂ ಕಾನೂನು ಸಮರ ನಡೆದಿದ್ದು, ದೆಹಲಿ ಸಾರಿಗೆ ನಿಗಮ ಹಾಗೂ ರಣವೀರ್ ಸಿಂಗ್ ಇದಕ್ಕಾಗಿ ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ.

1973 ರಲ್ಲಿ ಡಿಟಿಸಿ ಬಸ್ ಏರಿದ್ದ ಮಹಿಳೆಯೊಬ್ಬರಿಂದ 15 ಪೈಸೆ ಪಡೆದಿದ್ದ ಕಂಡಕ್ಟರ್ ಯಾದವ್, 10 ಪೈಸೆಯ ಟಿಕೇಟ್ ನೀಡಿ ಉಳಿದ 5 ಪೈಸೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದರೆನ್ನಲಾಗಿತ್ತು. ತಪಾಸಣೆಗೆ ಬಸ್ ಏರಿದ್ದ ಅಧಿಕಾರಿಗಳು ಯಾದವ್ ಹೆಚ್ಚುವರಿಯಾಗಿ 5 ಪೈಸೆ ಹೊಂದಿದ್ದ ಕಾರಣ ಶಿಸ್ತು ಕ್ರಮ ಜರುಗಿಸಿದ್ದರಲ್ಲದೇ ತನಿಖೆ ನಡೆಸಿ 1976 ರಲ್ಲಿ ಅವರನ್ನು ಕೆಲಸದಿಂದ ವಜಾ ಮಾಡಿದ್ದರು.

ಇದರ ವಿರುದ್ದ ಯಾದವ್ ಕಾನೂನು ಹೋರಾಟ ನಡೆಸಿದ್ದು, ತೀರ್ಪು ಅವರ ಪರ ಬಂದರೂ ದೆಹಲಿ ಸಾರಿಗೆ ನಿಗಮ ಮೇಲ್ಮನವಿ ಸಲ್ಲಿಸಿದ ಕಾರಣ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಡಿಟಿಸಿ, ಮೇಲ್ಮನವಿಯನ್ನು ವಜಾಗೊಳಿಸಿರುವ ದೆಹಲಿ ಕೈಕೋರ್ಟ್ ಇದುವರೆಗೂ ಪ್ರಕರಣಕ್ಕಾಗಿ ಎಷ್ಟು ವೆಚ್ಚ ಮಾಡಿದ್ದೀರಿ ಎಂದು ಪ್ರಶ್ನಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...