alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಮಂತರಿಗೆ ಬುದ್ದಿ ಕಲಿಸಲು ಈತ ಮಾಡಿದ್ದೇನು ಗೊತ್ತಾ?

chetanತಾನು ಕೆಲಸ ಮಾಡುತ್ತಿದ್ದ ಕಂಪನಿ ಮಾಲೀಕ ಕಷ್ಟ ಕಾಲದಲ್ಲಿ ತನಗೆ ಹಣ ನೀಡಲಿಲ್ಲವೆಂಬ ಕಾರಣಕ್ಕೆ ಶ್ರೀಮಂತರ ವಿರುದ್ದ ದ್ವೇಷ ಬೆಳೆಸಿಕೊಂಡಿದ್ದ ಯುವಕನೊಬ್ಬ ಇಂತಹ ಶ್ರೀಮಂತರುಗಳಿಗೆ ಬುದ್ದಿ ಕಲಿಸಲು ವಿಭಿನ್ನ ಹಾದಿ ತುಳಿದಿದ್ದಾನೆ.

ನಾಗ್ಪುರ ಮೂಲದ 22 ವರ್ಷದ ಯುವಕ ಚೇತನ್ ಮುಂಬೈನಲ್ಲಿ ನೆಲೆಸಿದ್ದು, ಶ್ರೀಮಂತರ ಮನೆ ಕಳವು ಮಾಡುವುದನ್ನೇ ತನ್ನ ಕಾಯಕವನ್ನಾಗಿಸಿಕೊಂಡಿದ್ದ. ಈ ಹಣದಿಂದ ದುಬಾರಿ ಬೆಲೆಯ ಬೈಕ್ ಖರೀದಿಸಿದ್ದಲ್ಲದೇ ತನ್ನ ಗೆಳತಿಗೆ ರೋಲೆಕ್ಸ್ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದ.

ಇದೀಗ ಮಲಬಾರ್ ಹಿಲ್ ಠಾಣೆಯ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಶ್ರೀಮಂತರಿಗೆ ಬುದ್ದಿ ಕಲಿಸಲು ತಾನು ಅಂತವರ ಮನೆಯನ್ನು ಹುಡುಕಿ ಕಳ್ಳತನ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ನಾಗ್ಪುರದಲ್ಲಿ ಶ್ರೀಮಂತನಂತೆ ಪೋಸ್ ಕೊಡುತ್ತಿದ್ದ ಚೇತನ್, ಮುಂಬೈನಲ್ಲಿ ಭಿಕ್ಷುಕನಂತೆ ಇರುತ್ತಿದ್ದನೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...