alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತ್ಯಸಂಸ್ಕಾರ ಮಾಡಿದ 10 ದಿನಗಳ ಬಳಿಕ ತಂದೆ ಪ್ರತ್ಯಕ್ಷ..!

father cremate55 ವರ್ಷದ ಅಂಜಯ್ಯ ಮೃತಪಟ್ಟು 10 ದಿನ, ಮನೆಯಲ್ಲಿ ವಿಧಿವಿಧಾನಗಳ ತಯಾರಿ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಮನೆಯಲ್ಲಿದ್ದವರೆಲ್ಲ ಬೆಚ್ಚಿ ಬಿದ್ದಿದ್ರು, ಕಾರಣ ಸಾವನ್ನಪ್ಪಿದ್ದ ಅಂಜಯ್ಯ ಮತ್ತೆ ಪ್ರತ್ಯಕ್ಷನಾಗಿದ್ದ.

ಅಂಜಯ್ಯ ಹೈದರಾಬಾದ್ ಅಂಬೆರ್ಪೆಟ್ ನ ಗೋಲ್ನಕದ ಹನುಮಂತ ನಗರದ ನಿವಾಸಿ. ಮದ್ಯವ್ಯಸನಿಯಾಗಿದ್ದ ಅಂಜಯ್ಯ ಕೆಲಸಕ್ಕೆ ಹೊರಟವನು ಮರಳಿ ಮನೆಗೆ ಬಂದಿರಲಿಲ್ಲ. ಮಗ ಕೃಷ್ಣ, ಅಪ್ಪನಿಗಾಗಿ ಹುಡುಕಾಟ ಶುರು ಮಾಡಿದ್ದ. ಸೆಪ್ಟೆಂಬರ್ 4ರಂದು ಕೃಷ್ಣ ತನ್ನ ತಂದೆಯ ಫೋಟೋವನ್ನು ಮಿರ್ ಚೌಕ್ ಪೊಲೀಸರಿಗೆ ತೋರಿಸಿ ಮಾಹಿತಿ ಕೇಳಿದ್ದ. ಕಂಠಪೂರ್ತಿ ಕುಡಿದು ರಸ್ತೆ ಬದಿ ಮಲಗಿದ್ದ ಅಂಜಯ್ಯನನ್ನು ಒಸ್ಮಾನಿಯಾ ಜನರಲ್ ಹಾಸ್ಪಿಟಲ್ ಗೆ ದಾಖಲಿಸಿರೋದಾಗಿ ಪೊಲೀಸರು ಮಾಹಿತಿ ನೀಡಿದ್ರು.

ಅಲ್ಲಿಗೆ ಧಾವಿಸಿ ಬಂದ ಕೃಷ್ಣಾಗೆ ತಂದೆ ಮಾತ್ರ ಸಿಗಲಿಲ್ಲ. ಸೆಪ್ಟೆಂಬರ್ 5 ರಂದು ಅಪ್ಪನ ಫೋಟೋ ಹಿಡಿದು ಅಫ್ಜಲ್ ಗಂಜ್ ಪೊಲೀಸ್ ಠಾಣೆಯತ್ತ ನಡೆದಿದ್ದ. 55 ವರ್ಷದ ವ್ಯಕ್ತಿಯೊಬ್ಬ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದಾಗಿಯೂ ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾಗಿ ಪೊಲೀಸರು ತಿಳಿಸಿದ್ರು. ತಲೆಗೆ ಪೆಟ್ಟು ಬಿದ್ದಿದ್ದರಿಂದ ಆಪರೇಷನ್ ಮಾಡಲಾಗಿತ್ತು, ಆತ ಅಂಜಯ್ಯನೇ ಎಂದು ಕೃಷ್ಣ ಮತ್ತವನ ತಾಯಿ ಗುರುತಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 8 ರಂದು ಆತ ಮೃತಪಟ್ಟಿದ್ದ. ಆದ್ರೆ ಅಸಲಿಗೆ ಅಲ್ಲಿ ಸಾವನ್ನಪ್ಪಿದ ವ್ಯಕ್ತಿ ಅಂಜಯ್ಯನಾಗಿರಲಿಲ್ಲ, ಬೇರ್ಯಾರನ್ನೋ ಅಂಜಯ್ಯ ಎಂದು ಭಾವಿಸಿ ಅಂತ್ಯಕ್ರಿಯೆ ನೆರವೇರಿಸಿದ್ದ ಕುಟುಂಬದವರು 10 ನೇ ದಿನದ ಕ್ರಿಯಾ ಕರ್ಮಕ್ಕೆ ತಯಾರಿ ಮಾಡಿಕೊಂಡಿದ್ರು. ಆಗ ಅಂಜಯ್ಯ ಮನೆಗೆ ಮರಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...