alex Certify
ಕನ್ನಡ ದುನಿಯಾ       Mobile App
       

Kannada Duniya

166 ಮೊಬೈಲ್ ಆರ್ಡರ್ ಮಾಡಿದ್ದವನು ಗಳಿಸಿದ್ದೆಷ್ಟು..?

ದೆಹಲಿಯಲ್ಲಿ ಅಮೆಜಾನ್ ಕಂಪನಿಗೆ ಟೋಪಿ ಹಾಕಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ 166 ದುಬಾರಿ ಸ್ಮಾರ್ಟ್ ಫೋನ್ ಗಳನ್ನು ಅಮೆಜಾನ್ ನಲ್ಲಿ ಬುಕ್ ಮಾಡಿದ್ದ. ತನಗೆ ಮೊಬೈಲ್ ಗಳ ಬದಲು ಖಾಲಿ ಬಾಕ್ಸ್ ಡೆಲಿವರಿ ಮಾಡಲಾಗಿದೆ. ಹಾಗಾಗಿ ನಾನು ಪಾವತಿಸಿದ ಹಣವನ್ನು ಮರಳಿಸಿ ಅಂತಾ ಹೇಳಿದ್ದ.

ಅದನ್ನು ನಂಬಿ ಕಂಪನಿ ರಿಫಂಡ್ ಮಾಡಿತ್ತು. ಅಸಲಿಗೆ ಆತನಿಗೆ ಖಾಲಿ ಬಾಕ್ಸ್ ಸಿಕ್ಕಿರಲಿಲ್ಲ. ಮೊಬೈಲ್ ಗಳನ್ನೇ ಡೆಲಿವರಿ ಮಾಡಲಾಗಿತ್ತು. ಅದನ್ನೆಲ್ಲ ಮಾರಿ ಸುಮಾರು 50 ಲಕ್ಷ ರೂಪಾಯಿ ಹಣ ಗಳಿಸಿದ್ದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿ ನಿರುದ್ಯೋಗಿಯಾಗಿ ಅಲೆಯುತ್ತಿದ್ದ ಶಿವಂ ಚೋಪ್ರಾನನ್ನು ಪೊಲೀಸರು ಬಂಧಿಸಿದ್ದಾರೆ.

ಆರಂಭದಲ್ಲಿ 2 ಮೊಬೈಲ್ ಬುಕ್ ಮಾಡಿ ಇದೇ ರೀತಿ ಅಮೆಜಾನ್ ಗೆ ವಂಚಿಸಿದ್ದ. ನಂತರ ಇದನ್ನೇ ಕಾಯಕ ಮಾಡಿಕೊಂಡಿದ್ದ. ಆ್ಯಪಲ್, ಸ್ಯಾಮ್ಸಂಗ್, ವನ್ ಪ್ಲಸ್ ಮೊಬೈಲ್ ಗಳನ್ನು ಆರ್ಡರ್ ಮಾಡ್ತಿದ್ದ. ಅವನ್ನೆಲ್ಲ ಓ ಎಲ್ ಎಕ್ಸ್ ಮತ್ತು ಗಫರ್ ಮಾರ್ಕೆಟ್ ನಲ್ಲಿ ಸೇಲ್ ಮಾಡಿದ್ದ. ಕೇವಲ 2 ತಿಂಗಳಲ್ಲಿ ಶಿವಂ 50 ಲಕ್ಷ ರೂಪಾಯಿ ಗಳಿಸಿದ್ದ.

ಬೇರೆ ಬೇರೆ ಹೆಸರಿನಿಂದ ಮೊಬೈಲ್ ಆರ್ಡರ್ ಮಾಡಲು ಟೆಲಿಕಾಂ ಅಂಗಡಿಯವನೊಬ್ಬ ಶಿವಂಗೆ 141 ಸಿಮ್ ಕಾರ್ಡ್ ಗಳನ್ನು ಕೊಟ್ಟಿದ್ದ. ಆತನನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವಂ ಬಳಿ 19 ಮೊಬೈಲ್, 12 ಲಕ್ಷ ನಗದು, 40 ಪಾಸ್ ಬುಕ್ ಗಳು ದೊರೆತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...