alex Certify
ಕನ್ನಡ ದುನಿಯಾ       Mobile App
       

Kannada Duniya

ಮೀನಿನ ಔಷಧಕ್ಕೆ ಮುಗಿಬಿದ್ದ ಜನ

Fish_Medicin

ಹೈದರಾಬಾದ್: ಮೃಗಶಿರ ಮಳೆಯ ಸಂದರ್ಭದಲ್ಲಿ ಅಸ್ತಮಾ, ಶ್ವಾಸಕೋಶ ಮೊದಲಾದ ಕಾಯಿಲೆ ಇರುವ ರೋಗಿಗಳಿಗೆ ಹೈದರಾಬಾದ್ ನಂಪಳ್ಳಿಯ ಬಾತಿನಿ ಗೌಡ ಕುಟುಂಬದವರು ಹಿಂದಿನಿಂದಲೂ ಮೀನಿನ ಔಷಧವನ್ನು ಉಚಿತವಾಗಿ ಕೊಡುತ್ತಾರೆ.

ಸುಮಾರು 160 ವರ್ಷಗಳಿಂದ ಈ ಕುಟುಂಬ ಮೀನಿನ ಔಷಧ ಕೊಡುತ್ತಿದ್ದು, ಇದನ್ನು ಸೇವಿಸಿದರೆ ಅಸ್ತಮಾ ಮೊದಲಾದ ಕಾಯಿಲೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ನಂಪಳ್ಳಿಯ ವಸ್ತು ಪ್ರದರ್ಶನ ಮೈದಾನದಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದು, ಮೀನಿನ ಔಷಧವನ್ನು ಪಡೆದುಕೊಂಡಿದ್ದಾರೆ. ಮೂಲಿಕೆಗಳಿಂದ ತಯಾರಿಸಿದ ಔಷಧವನ್ನು ಮೀನಿನಲ್ಲಿ ಇಟ್ಟು ನುಂಗಿಸಲಾಗುತ್ತದೆ.

ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 40,000ಕ್ಕೂ ಅಧಿಕ ಮಂದಿಗೆ ಮೀನಿನ ಔಷಧ ವಿತರಿಸಲಾಗಿದೆ. ದೂರದ ಊರುಗಳಿಂದಲೂ ಜನ ಬಂದಿದ್ದರು. ಇದು ಅವೈಜ್ಞಾನಿಕ ಪದ್ಧತಿ ಎಂದು ಕೆಲವರು ಈ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಯೋಗಾಲಯ ಪರೀಕ್ಷೆಗಳಲ್ಲಿ ಮೀನಿನ ಔಷಧಿ ಸುರಕ್ಷಿತ ಎಂದು ಸಾಬೀತಾಗಿದೆ ಎಂದು ಈ ಕುಟುಂಬದವರು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...