alex Certify
ಕನ್ನಡ ದುನಿಯಾ       Mobile App
       

Kannada Duniya

ಗಿರಾಕಿಯಾಗಿ ಮಹಿಳೆ ಬಳಿ ಬಂದವ ಬಾಳ ಸಂಗಾತಿಯಾದ

couple

ಬಡತನದಿಂದ ಬಳಲಿದ್ದ 27 ವರ್ಷದ ಮಹಿಳೆಯೊಬ್ಳು ನೇಪಾಳದಿಂದ ಭಾರತಕ್ಕೆ ಬಂದಿದ್ಲು. ಇಲ್ಲಿ ಅವಳಿಗೆ ಕೆಲಸ ಸಿಗಲಿಲ್ಲ, ಬದಲಾಗಿ ಆಕೆ ದೆಹಲಿಯ ಜಿಬಿ ರೋಡ್ ವೇಶ್ಯಾವಾಟಿಕೆಯನ್ನು ಸೇರಬೇಕಾಯ್ತ. ಅನಿವಾರ್ಯವಾಗಿ ಆಕೆ ಮೈಮಾರಿ ಬದುಕಲಾರಂಭಿಸಿದ್ಲು. ವೇಶ್ಯಾವಾಟಿಕೆಗೆ ಬಂದ ಗ್ರಾಹಕನೊಬ್ಬನ ಜೊತೆ ಅವಳಿಗೆ ಸ್ನೇಹ ಬೆಳೆದಿತ್ತು.

ಆತನಿಗೆ 28 ವರ್ಷ, ಚಾಲಕನಾಗಿ ಕೆಲಸ ಮಾಡ್ತಾ ಇದ್ದ. ಇಬ್ಬರ ಮಧ್ಯೆ ಪ್ರೀತಿ ಅದೆಷ್ಟು ಗಾಢವಾಗಿತ್ತು ಅಂದ್ರೆ, ಅವಳನ್ನು ಅಲ್ಲಿಂದ ರಕ್ಷಿಸಿ ಕರೆದೊಯ್ದು ಮದುವೆ ಮಾಡಿಕೊಳ್ಳಲು ಆತ ಸಿದ್ಧನಾಗಿದ್ದ. ಹಲವು ಬಾರಿ ವೇಶ್ಯಾವಾಟಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ರೂ ಸಾಧ್ಯವಾಗಲೇ ಇಲ್ಲ.

ಕೊನೆಗೆ ಆತ ದೆಹಲಿ ಮಹಿಳಾ ಆಯೋಗದ ಮೊರೆ ಹೋಗಿದ್ದ. ಪೊಲೀಸರು ಹಾಗೂ ಮಹಿಳಾ ಆಯೋಗ ಜೊತೆಯಾಗಿ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದೆ. ಚಾಲಕನ ಕುಟುಂಬದವರು ಕೂಡ ನೇಪಾಳಿ ಮಹಿಳೆಯನ್ನು ಸೊಸೆಯಾಗಿ ಸ್ವೀಕರಿಸಲು ಒಪ್ಪಿದ್ದಾರಂತೆ.

ಶೀಘ್ರದಲ್ಲೇ ಮದುವೆಯಾಗಿ ಹೊಸ ಬದುಕು ಆರಂಭಿಸಲು ಇಬ್ಬರೂ ಸಜ್ಜಾಗಿದ್ದಾರೆ. ಜಿಬಿ ರೋಡ್ ನಲ್ಲಿರೋ ವೇಶ್ಯಾವಾಟಿಕೆ ಅಡ್ಡೆಯನ್ನು ಸಂಪೂರ್ಣ ಬಂದ್ ಮಾಡಲು ಪೊಲೀಸರು ಕೂಡ ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...