alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಫಿಟ್ನೆಸ್ ಚಾಲೆಂಜ್ ಗೆ ಕುಮಾರಸ್ವಾಮಿ ನೀಡಿದ್ರು ಈ ಪ್ರತಿಕ್ರಿಯೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗದ ವಿಡಿಯೋವನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಇದ್ರ ಜೊತೆಗೆ ಮೋದಿ, ಕರ್ನಾಟಕದ ನೂತನ ಸಿಎಂ ಕುಮಾರಸ್ವಾಮಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದಾರೆ.

ನರೇಂದ್ರ ಮೋದಿ ಫಿಟ್ನೆಸ್ ಚಾಲೆಂಜ್ ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮೋದಿಗೆ ಕುಮಾರಸ್ವಾಮಿ ಧನ್ಯವಾದ ಹೇಳಿದ್ದಾರೆ. ಟ್ವೀಟರ್ ಮೂಲಕ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಿಮಗೆ ಧನ್ಯವಾದಗಳು. ದೈಹಿಕ ಸಾಮರ್ಥ್ಯ ಜೀವನದ ಪ್ರಮುಖ ಭಾಗ ಎಂಬುದನ್ನು ನಾನು ನಂಬುತ್ತೇನೆ. ಯೋಗ ಹಾಗೂ ಟ್ರೆಡ್ ಮಿಲ್ ನನ್ನ ಜೀವನದ ಪ್ರಮುಖ ಭಾಗ. ನಾನು ನನ್ನ ರಾಜ್ಯದ ಫಿಟ್ನೆಸ್ ಹಾಗೂ ಅಭಿವೃದ್ಧಿ ಬಗ್ಗೆ ಹೆಚ್ಚು ಚಿಂತಿತನಾಗಿದ್ದೇನೆ. ಇದಕ್ಕೆ ನಿಮ್ಮ ಬೆಂಬಲ ಎದುರು ನೋಡುತ್ತಿದ್ದೇನೆಂದು ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಫಿಟ್ನೆಸ್ ಚಾಲೆಂಜ್ ಶುರು ಮಾಡಿದ್ದರು. ಅನೇಕರು ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...