alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಗೆ ಬಿದ್ದ ಮಗಳನನ್ನು ಮನೆಯಲ್ಲಿ ಬಂಧಿಸಿಟ್ಟ ಜಡ್ಜ್…!

ಬಿಹಾರದ ಜಿಲ್ಲಾ ಜಡ್ಜ್ ತನ್ನ ಮಗಳನ್ನು ಮನೆಯಲ್ಲಿ ಬಂಧಿಸಿಟ್ಟ ಘಟನೆ ನಡೆದಿದೆ. ಮಗಳು ವಕೀಲರೊಬ್ಬರನ್ನು ಪ್ರೀತಿಸಿದ್ದೇ ಇದಕ್ಕೆ ಕಾರಣವಾಗಿದೆ. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪಾಟ್ನಾ ಹೈಕೋರ್ಟ್ ಜಡ್ಜ್ ಗೆ ಛೀಮಾರಿ ಹಾಕಿದೆ. ನಿಮ್ಮಂತ ಜಡ್ಜ್ ಮಾಡುವ ಕೆಲಸ ನಾಚಿಕೆ ತರಿಸುತ್ತದೆ ಎಂದ ಕೋರ್ಟ್, ಜಡ್ಜ್ ಮಗಳನ್ನು ಹೈಕೋರ್ಟ್ ಮುಂದೆ ನಿಲ್ಲಿಸುವಂತೆ ಎಸ್ ಎಸ್ಪಿಗೆ ಸೂಚನೆ ನೀಡಿದೆ.

ಜಡ್ಜ್ ಮಗಳನ್ನು ಬಂಧನದಲ್ಲಿರಿಸಿರುವ ವಿಷ್ಯ ನ್ಯೂಸ್ ಎಜೆನ್ಸಿಯೊಂದರಲ್ಲಿ ಪ್ರಕಟವಾಗಿತ್ತು. ಇದನ್ನು ನೋಡಿದ ಹೈಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಜಡ್ಜ್ ಸುಭಾಷ್ ಚಂದ್ರ ಬಂಸಲ್ ಮಗಳು ಲಾ ಓದುತ್ತಿದ್ದಾಳೆ. 2012ರಿಂದಲೇ ಸುಪ್ರೀಂ ಕೋರ್ಟ್ ವಕೀಲ ಸಿದ್ಧಾರ್ಥ್ ಜೊತೆ ಪ್ರೇಮ ಪ್ರಸಂಗ ನಡೆಯುತ್ತಿತ್ತು. ಜಡ್ಜ್ ಗೆ ಈ ಬಗ್ಗೆ ತಿಳಿದಿರಲಿಲ್ಲ. ವಿಷ್ಯ ಕೆಲ ದಿನಗಳ ಹಿಂದಷ್ಟೇ ತಂದೆಗೆ ಗೊತ್ತಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...