alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಯಂದು ಕೇವಲ 3 ಗಂಟೆ ಪಟಾಕಿ ಸಿಡಿಸಲು ಅವಕಾಶ

ದೀಪಾವಳಿಗೂ ಮೊದಲು ಸುಪ್ರೀಂ ಕೋರ್ಟ್ ಹಾಗೂ ಬಾಂಬೈ ಹೈಕೋರ್ಟ್ ಆದೇಶದ ನಂತ್ರ ಹರ್ಯಾಣ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ದೀಪಾವಳಿ ದಿನ ಹರ್ಯಾಣ, ಪಂಜಾಬ್ ಮತ್ತು ಚಂಡೀಗಢದಲ್ಲಿ ಸಂಜೆ 6.30ರಿಂದ 9.30ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಕೇವಲ ಮೂರು ಗಂಟೆಗಳ ಕಾಲ ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಇದ್ರ ಜೊತೆಗೆ ಪಂಜಾಬ್, ಹರ್ಯಾಣ, ಚಂಡೀಗಢದಲ್ಲಿ ಲಾಟರಿ ಮೂಲಕ ಪಟಾಕಿ ಮಾರಾಟ ಮಾಡಲು ಲೈಸೆನ್ಸ್ ನೀಡಿದೆ. ವಿಡಿಯೋಗ್ರಫಿಗೂ ಅವಕಾಶ ನೀಡಲಾಗಿದ್ದು, ಕೋರ್ಟ್ ನಿಗದಿಪಡಿಸಿದ ಸಮಯದ ನಂತ್ರ ಯಾರೂ ಪಟಾಕಿ ಸಿಡಿಸುವಂತಿಲ್ಲ. ಸಮಯ ಮೀರಿ ಪಟಾಕಿ ಸಿಡಿಸಿದ್ರೆ ಪಿಸಿಆರ್ ವ್ಯಾನ್ ಗಳು ಇದ್ರ ಪರಿಶೀಲನೆ ನಡೆಸಲಿವೆ.

ಹೆಚ್ಚಾಗುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ಈ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಕೂಡ ದೆಹಲಿ-ಎನ್ ಸಿ ಆರ್ ನಲ್ಲಿ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿದೆ. ಇದು ಪಟಾಕಿ ಮಾರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...