alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ವಿವರ ಹಂಚಿಕೊಳ್ಳುವ ಮುನ್ನ ನಿಮ್ಮ ಗಮನದಲ್ಲಿರಲಿ….

ಆಧಾರ್ ಮಾಹಿತಿಯನ್ನು ಯಾರಿಗಾದ್ರೂ ನೀಡುವ ಮುನ್ನ ಅದರ ಹಿಂದಿನ ಉದ್ದೇಶ ಏನು ಅನ್ನೋದನ್ನು ಖಚಿತಪಡಿಸಿಕೊಳ್ಳಿ. ಇನ್ಷೂರೆನ್ಸ್ ಪಾಲಿಸಿಯಿಂದ ಹಿಡಿದು ಮೊಬೈಲ್ ಸಿಮ್ ಕಾರ್ಡ್ ಖರೀದಿಗೂ ಈಗ ಆಧಾರ್ ವಿವರ ಬೇಕೇ ಬೇಕು.

ಸಣ್ಣ ಉಳಿತಾಯ ಯೋಜನೆಗಳಾದ ಕಿಸಾನ್ ವಿಕಾಸ್ ಪತ್ರ, ಪಿಎಫ್, ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಎಲ್ಲದರ ಜೊತೆಗೂ ಆಧಾರ್ ಲಿಂಕ್ ಮಾಡಲಾಗ್ತಿದೆ. ಹಾಗಂತ ತರಾತುರಿಯಲ್ಲಿ ಯಾರೋ ಕೇಳಿದ್ರು ಅಂತಾ ನಿಮ್ಮ ಆಧಾರ್ ವಿವರವನ್ನು ನೀಡಬೇಡಿ.

ಸರಿಯಾಗಿ ಮಾಹಿತಿ ಪಡೆದು, ಅಧಿಕೃತ ಎನಿಸಿದಲ್ಲಿ ಮಾತ್ರ ಆಧಾರ್ ಸಂಖ್ಯೆ ಕೊಡಿ. ಯಾಕಂದ್ರೆ ನಿಮ್ಮ ಆಧಾರ್ ವಿವರ ಪಡೆದು ಅದನ್ನು ಅಕ್ರಮ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕೂಡ ಹ್ಯಾಕರ್ ಗಳ ಪಾಲಾಗುವ ಭೀತಿಯಿರುತ್ತದೆ.

ಆಧಾರ್ ಕಾರ್ಡ್ ಮಾಡಿಸಲು ವಯಸ್ಸಿನ ಮಿತಿ ಇಲ್ಲ. ಮಗುವಿಗೆ 5 ವರ್ಷವಾಗುತ್ತಿದ್ದಂತೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಮಾಡಿಸಿ. ಇಲ್ಲದೇ ಹೋದಲ್ಲಿ ಬಾಲ್ ಆಧಾರ್ ಅಮಾನ್ಯವಾಗುತ್ತದೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು, ವಿಕಲಚೇತನರು ಕೂಡ ಆಧಾರ್ ಕಾರ್ಡ್ ಪಡೆಯಬಹುದು.

ನಿಮ್ಮ ಬಳಿ ಸೂಕ್ತ ದಾಖಲಾತಿಯ ಕೊರತೆಯಿದ್ದಲ್ಲಿ ಚಿಂತಿಸಬೇಕಾಗಿಲ್ಲ. ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತದೆ. ಅಷ್ಟೇ ಅಲ್ಲ ಅಪ್ಪಿತಪ್ಪಿಯೂ ನಿಮ್ಮ ಆಧಾರ್ ಓಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. UIDAI ಈ ಬಗ್ಗೆ ಅಧಿಕೃತ ಸಲಹೆ ಸೂಚನೆಗಳನ್ನು ಕೂಡ ಟ್ವಿಟ್ಟರ್ ಮೂಲಕ ಜನರಿಗೆ ತಲುಪಿಸುತ್ತಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...