alex Certify
ಕನ್ನಡ ದುನಿಯಾ       Mobile App
       

Kannada Duniya

ಆಶ್ಚರ್ಯ ಆದ್ರೂ ನಿಜ ! ರಕ್ತ ಸುರಿಸಿದ ಮರ

tree bloodಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿದೆ. ಈ ವೇಳೆ ಪರಿಸರದ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಭಾರೀ ಚರ್ಚೆ ನಡೆದಿದೆ. ಆದರೂ ಮಾನವನ ದುರಾಸೆಯ ಕಾರಣದಿಂದ ಅರಣ್ಯ ನಾಶ ನಡೆಯುತ್ತಲೇ ಇದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ.

ವ್ಯಕ್ತಿಯೊಬ್ಬ ಮರ ಕತ್ತರಿಸುವ ವೇಳೆ ಅದರಿಂದ ರಕ್ತದ ಮಾದರಿಯ ಕೆಂಪು ದ್ರವ ಹೊರ ಬಂದಿದೆಯಲ್ಲದೇ ಮಾನವನ ನಾಡಿ ಮಿಡಿಯುವಂತೆ ಮರದ ಕಾಂಡವೂ ಮಿಡಿಯುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ. ಮರ ಕತ್ತರಿಸುವ ವೇಳೆ ಮರದ ಪೊಟರೆಯಲ್ಲಿ ಅಡಗಿದ್ದ ಓತಿಕ್ಯಾತ ತುಂಡಾಗಿ ರಕ್ತ ಬರುತ್ತಿರಬೇಕೆಂದು ಮೊದಲಿಗೆ ಭಾವಿಸಿದ್ದ ಆತ, ಬಳಿಕ ಸೂಕ್ಷ್ಮವಾಗಿ ಪರಿಶೀಲಿಸಿದ ವೇಳೆ ಮರದಿಂದಲೇ ಕೆಂಪು ದ್ರವ ಸುರಿಯುತ್ತಿರುವುದು ಕಂಡು ಬಂದಿದೆ.

ಮನುಷ್ಯ, ಪ್ರಾಣಿ- ಪಕ್ಷಿಗಳಿಗಿರುವಂತೆ ಗಿಡ- ಮರಗಳಿಗೂ ಜೀವವಿದೆ. ಮನುಷ್ಯನಿಗೆ ಜೀವಿಸಲು ಅವಶ್ಯಕವಾದ ಅಮ್ಲಜನಕ, ಮರ- ಗಿಡಗಳಿಂದ ದೊರೆಯುತ್ತಿದ್ದು, ಜೊತೆಗೆ ಪ್ರಕೃತಿಯ ಸಮತೋಲನವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಪ್ರಕೃತಿ ಮಾತೆಯನ್ನು ರಕ್ಷಿಸಲು ಮುಂದಾಗುವ ಬದಲು ಅರಣ್ಯ ನಾಶ ದಿನೇ ದಿನೇ ಹೆಚ್ಚಾಗುತ್ತಿರುವ ಮಧ್ಯೆ ಈ ವಿಡಿಯೋ ಗಮನ ಸೆಳೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...