alex Certify
ಕನ್ನಡ ದುನಿಯಾ       Mobile App
       

Kannada Duniya

ಸುರಿವ ಮಳೆಯಲ್ಲೂ ಕರ್ತವ್ಯ ನಿರ್ವಹಿಸಿದ ಟ್ರಾಫಿಕ್ ಪೇದೆ

ಮುಂಬೈನಲ್ಲಿ ವರುಣನ ಅಬ್ಬರದ ನಡುವೆ ಈ ವ್ಯಕ್ತಿ ಮಾಡಿರುವ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ಭಾರೀ ಮಳೆಯಲ್ಲಿಯೇ ನಿಂತು ಸಂಚಾರಿ ವ್ಯವಸ್ಥೆಯನ್ನು ನಿಭಾಯಿಸಿದ್ದಾರೆ ಪೇದೆ ನಂದಕುಮಾರ್ ಇಂಗ್ಲೆ.

ಈ ಸಂದರ್ಭದಲ್ಲಿ ಇವರು ರೇನ್ ಕೋಟ್ ಕೂಡಾ ಧರಿಸಿರಲಿಲ್ಲ. ರಸ್ತೆ ಬ್ಲಾಕ್ ಆಗದಂತೆ ಕಾಂಡೀವಲಿ ಬಳಿ ಇರುವ ಅಕುರ್ಲಿ ರಸ್ತೆಯಲ್ಲಿನ ಟ್ರಾಫಿಕ್ ನಿಭಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.  ಇವರು ಕರ್ತವ್ಯ ನಿಭಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಾತ್ರಿ 8 ಗಂಟೆಯ ನಂತರ ಅಕುರ್ಲಿ ರಸ್ತೆಯ ಬಳಿ ಅತಿ ಹೆಚ್ಚು ವಾಹನ ದಟ್ಟಣೆ ಉಂಟಾಗುತ್ತದೆ. ಇದೇ ವೇಳೆ ಜೋರು ಮಳೆ ಆರಂಭವಾಗಿದ್ದು, ಬ್ಯಾರಿಕೇಡ್ ಗಳು ಗಾಳಿಗೆ ತೂರಿಕೊಂಡು ಸುಮಾರು 150 ಮೀಟರ್ ದೂರಕ್ಕೆ ಬಿದ್ದಿತ್ತು.

ಈ ಬಗ್ಗೆ ಮಾತನಾಡಿದ ನಂದಕುಮಾರ್, ಆ ಸಮಯದಲ್ಲಿ ನಾನು ರೇನ್ ಕೋಟ್ ಧರಿಸುವ ಸ್ಥಿತಿಯಲ್ಲಿರಲಿಲ್ಲ. ನನ್ನ ಫೋನ್ ಮತ್ತು ಪರ್ಸ್ ಅನ್ನು ವಾರ್ಡನ್ ಕೈಗೆ ಕೊಟ್ಟಿದ್ದೆ. ಅದಲ್ಲದೇ ಅಕುರ್ಲಿ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗುವುದರಿಂದ ನಾನು ಬೇರೆಡೆಗೆ ಕದಲದೇ ಅಲ್ಲಿಯೇ ನಿಂತು ಕಾರ್ಯ ನಿರ್ವಹಿಸಿದ್ದೇನೆ. ಅದೇ ಸ್ಥಳದಲ್ಲಿ ಮರವೊಂದು ಉರುಳಿ ಬಿದ್ದಿದ್ದು, ಮತ್ತಷ್ಟು ವಾಹನ ದಟ್ಟಣೆಗೆ ಕಾರಣವಾಗಿತ್ತು. ನನ್ನ ಸಹಾಯಕ್ಕೆ ದಾಹಿಸರ್ ಸಂಚಾರಿ ಪೊಲೀಸ್ ಅಧಿಕಾರಿ ಪ್ರದೀಪ್ ಭಿಲಾಯ್ ಜೊತೆಗಿದ್ದರು. ಇಬ್ಬರು ರಾತ್ರಿ 11.30 ರವರೆಗೆ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

ಇನ್ನು ಫೇಸ್ ಬುಕ್ ನಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಕೇಳಿದಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ತಾವು ಯಾವುದೇ ಖಾತೆ ಹೊಂದಿಲ್ಲ. ಅಲ್ಲದೇ, ಈ ವಿಡಿಯೋ ಬಗ್ಗೆಯೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಂದಕುಮಾರ್ ಅವರು ಕಳೆದ 23 ವರ್ಷಗಳಿಂದ ಮುಂಬೈ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...