alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮೊಬೈಲ್ ನಲ್ಲಿ ಇಲ್ವಾ ಈ ಹೊಸ ಆಪ್…?

ಮೊಬೈಲ್ ಗಳಲ್ಲಿ ಅಲಾರಾಂ ಸೆಟ್ ಮಾಡಿ ಮಲಗುವುದು ಸದ್ಯ ಜನರ ಜೀವನ ಪದ್ಧತಿ. ಅಲ್ಲದೆ ದಿನಂಪ್ರತಿ ಒಂದೇ ರಿಂಗ್ ಟೋನ್ ಕೇಳಿ ಕೇಳಿ, ಬೇಜಾರು. ಇದಕ್ಕಾಗಿ ಗೂಗಲ್ ಹೊಸ ಪ್ಲಾನ್ ಮಾಡಿಕೊಂಡಿದ್ದು, ಇನ್ನು ನಿಮ್ಮ ಇಷ್ಟದ ಹಾಡನ್ನು ಅಲಾರಾಂ ಆಗಿ ಸೆಟ್ ಮಾಡಿಕೊಳ್ಳಬಹುದು.

ಗೂಗಲ್ ಇತ್ತೀಚಿಗೆ ಕ್ಲಾಕ್ ಆಪ್ ಬಿಡುಗಡೆ ಮಾಡಿದೆ. ಈ ಆಪ್ ನಲ್ಲಿ ಮೊಬೈಲ್ ಬಳಕೆದಾರರು ತಮಗೆ ಇಷ್ಟವಾದ ಹಾಡನ್ನು ಅಲಾರಂ ಟೋನ್ ಆಗಿ ಸೆಟ್ ಮಾಡಿಕೊಳ್ಳಬಹುದಾಗಿದೆ.

ಸ್ಪಾಟಿಫೈ ಪ್ಲೇ ಲಿಸ್ಟ್ ನಲ್ಲಿ ನಿಮ್ಮ ಇಷ್ಟದ ಹಾಡನ್ನು ನಿಮ್ಮ ಅಲಾರಾಂ ಆಗಿ ಸೆಟ್ ಮಾಡಿಕೊಳ್ಳಬಹುದು. ನೂತನವಾಗಿ ಬಿಡುಗಡೆಗೊಂಡ ಸ್ಪಾಟಿಫೈ ಹಾಗೂ ಕ್ಲಾಕ್ ಗಳಲ್ಲಿ ನೀವು ಇದರ ಲಾಭ ಪಡೆಯಬಹುದು. ಈ ಆಪ್ ಸದ್ಯ ಆಂಡ್ರಾಯ್ಡ್ 5.0 ನಲ್ಲಿ ಲಭ್ಯವಾಗ್ತಿದೆ.

ನಿಮ್ಮ ಮೊಬೈಲ್ ನಲ್ಲಿ ಕ್ಲಾಕ್ ಅಪ್ ಡೇಟ್ ಕೇಳಿದ್ರೆ, ಅಪ್ ಡೇಟ್ ಮಾಡಿದಾಗ ಈ ಸೌಲಭ್ಯ ನಿಮಗೆ ಸಿಗದೆ ಇದ್ದಲ್ಲಿ ಹತಾಶರಾಗುವ ಅವಶ್ಯಕತೆ ಇಲ್ಲವೇ ಇಲ್ಲ. ಸ್ಪಾಟಿಫೈ ಆಪ್ ಡೌನ್ ಲೋಡ್ ಮಾಡಿಕೊಂಡ್ರೆ ಸಾಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...