alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ ಪ್ರತಿದಿನ ಮೊಳಗಲಿದೆ ‘ರಾಷ್ಟ್ರಗೀತೆ’

ಹರಿಯಾಣದ ಗ್ರಾಮವೊಂದರಲ್ಲಿ ಪ್ರತಿ ದಿನ ಬೆಳಿಗ್ಗೆ ಲೌಡ್ ಸ್ಪೀಕರ್ ನಲ್ಲಿ ‘ರಾಷ್ಟ್ರಗೀತೆ’ ಮೊಳಗಲಿದ್ದು, ಗ್ರಾಮಸ್ಥರು ಅದಕ್ಕೆ ದ್ವನಿಗೂಡಿಸಲಿದ್ದಾರೆ. ಫರೀದಾಬಾದ್ ಜಿಲ್ಲೆಯ ಬಂಕಾಪುರ್ ಗ್ರಾಮದ ಸರಪಂಚ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಗ್ರಾಮಸ್ಥರೆಲ್ಲರೂ ಒಕ್ಕೂರಲಿನಿಂದ ಸಹಮತಿಸಿದ್ದಾರೆ.

ಗ್ರಾಮದ ಸರಪಂಚ್ ಸಚಿನ್, ತೆಲಂಗಾಣದ ಜಮ್ಮಿಕುಂತಾ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಲೌಡ್ ಸ್ಪೀಕರ್ ಮೂಲಕ ಪ್ರತಿದಿನ ಬೆಳಿಗ್ಗೆ ರಾಷ್ಟ್ರಗೀತೆ ಪ್ರಸಾರ ಮಾಡುತ್ತಿರುವ ಸುದ್ದಿಯನ್ನು ಟಿವಿಯಲ್ಲಿ ನೋಡಿದ್ದರು. ಆಗ ತಮ್ಮ ಗ್ರಾಮದಲ್ಲೂ ಈ ರೀತಿ ಮಾಡಬಾರದೇಕೆ ಎಂಬ ಯೋಚನೆ ಅವರಿಗೆ ಬಂದಿದ್ದು, ಅದು ಈಗ ಕಾರ್ಯರೂಪಕ್ಕೆ ಬಂದಿದೆ.

ಗ್ರಾಮದ ಸುತ್ತಲೂ 20 ಲೌಡ್ ಸ್ಪೀಕರ್ ಹಾಗೂ 22 ಸಿಸಿ ಟಿವಿಗಳನ್ನು ಅಳವಡಿಸಲಾಗಿದ್ದು, ಸರಪಂಚ್ ಮನೆಯಲ್ಲಿ ಕಂಟ್ರೋಲ್ ರೂಮ್ ನಿರ್ಮಿಸಲಾಗಿದೆ. ರಾಷ್ಟ್ರಗೀತೆ ಮೊಳಗುತ್ತಿದ್ದಾಗ ಅದಕ್ಕೆ ಎಲ್ಲರೂ ಗೌರವ ಸೂಚಿಸುತ್ತಿದ್ದಾರೆಯೇ ಎಂಬುದನ್ನು ಸಿಸಿ ಟಿವಿ ಮೂಲಕ ಗಮನಿಸಲಾಗುತ್ತದೆ. ತೆಲಂಗಾಣದ ಗ್ರಾಮದ ಬಳಿಕ ರಾಷ್ಟ್ರಗೀತೆ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಂಡಿರುವ ದೇಶದ ಎರಡನೇ ಗ್ರಾಮ ಎಂಬ ಹೆಗ್ಗಳಿಕೆಗೆ ಬಂಕಾಪುರ್ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...