alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದ ಯುವತಿಯರು ಧರಿಸುವಂತಿಲ್ಲ ಜೀನ್ಸ್…!

ಹರಿಯಾಣದ ಸೋನೆಪತ್ ಜಿಲ್ಲೆಯ ಇಶಾಪುರ್ ಖೇರಿ ಗ್ರಾಮದ ಪಂಚಾಯಿತಿ ಮುಖಂಡರು, ಯುವತಿಯರು ಮೊಬೈಲ್ ಬಳಸುವುದರ ಕುರಿತು ಹಾಗೂ ಜೀನ್ಸ್ ಧರಿಸುವುದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ನಿರ್ಣಯ ಈಗ ವಿವಾದಕ್ಕೆ ಕಾರಣವಾಗಿದೆ.

ಯುವತಿಯರು ಮೊಬೈಲ್ ಬಳಸಬಾರದು ಹಾಗೂ ಜೀನ್ಸ್ ಧರಿಸಬಾರದೆಂಬ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಮೊಬೈಲ್ ಬಳಕೆಯಿಂದ ಹಾಗೂ ಜೀನ್ಸ್ ಧರಿಸುವುದರಿಂದ ಯುವತಿಯರು ಹುಡುಗರ ಜೊತೆ ಪರಾರಿಯಾಗುತ್ತಾರೆಂದು ಹೇಳುವ ಮೂಲಕ ಪಂಚಾಯಿತಿ ಸರಪಂಚ್ ಪ್ರೇಮ್ ಸಿಂಗ್ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಗ್ರಾಮದ ಇಬ್ಬರು ಯುವತಿಯರು ತಾವು ಪ್ರೀತಿಸಿದ ಹುಡುಗರ ಜೊತೆ ಪರಾರಿಯಾಗಿದ್ದರೆನ್ನಲಾಗಿದ್ದು, ಅವರು ಜೀನ್ಸ್ ಧರಿಸುತ್ತಿದ್ದರು ಹಾಗೂ ಮೊಬೈಲ್ ಬಳಸುತ್ತಿದ್ದರು. ಈ ಕಾರಣಕ್ಕಾಗಿಯೇ ಪರಾರಿಯಾಗಿದ್ದಾರೆಂಬ ತೀರ್ಮಾನಕ್ಕೆ ಬಂದಿರುವ ಪಂಚಾಯಿತಿ ಮುಖಂಡರು, ಈ ನಿರ್ಣಯ ಕೈಗೊಂಡಿದ್ದಾರೆನ್ನಲಾಗಿದೆ. ಪಂಚಾಯಿತಿ ನಿರ್ಣಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಇದನ್ನು ಸಮರ್ಥಿಸಿದರೆ ಮತ್ತೆ ಕೆಲವರು ವಿರೋಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...