alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ನೌಕರರಿಗೆ ಹರಿಯಾಣ ಸರ್ಕಾರದಿಂದ “ಬಿಗ್ ಶಾಕ್”

ಹರಿಯಾಣ ಸರ್ಕಾರ ತನ್ನ ಸಿಬ್ಬಂದಿ ವರ್ಗಕ್ಕೆ ವರದಕ್ಷಿಣೆಯ ದಾಖಲೆಗಳನ್ನ ಕಡ್ಡಾಯವಾಗಿ ಸಲ್ಲಿಸುವಂತೆ ಆದೇಶ ಜಾರಿ ಮಾಡಿದೆ.

ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪುರುಷ ಸಿಬ್ಬಂದಿ ವರದಕ್ಷಿಣೆಯಲ್ಲಿ ತೆಗೆದುಕೊಂಡಿರುವ ವಸ್ತುಗಳ ಪಟ್ಟಿಯನ್ನ ಮಾಡಿ ಆ ಮಾಹಿತಿಯನ್ನ ನೀಡ್ಲೇಬೇಕು ಅಂತ ತಿಳಿಸಿದೆ.
ಸದ್ಯಕ್ಕೆ ಈ ಮಾಹಿತಿಯನ್ನ ನೀಡೋದಕ್ಕೆ ಸರ್ಕಾರ ಪುರುಷ ನೌಕರರರಿಗೆ ಯಾವುದೇ ಗಡುವು ನೀಡಿಲ್ಲ.

ಆದ್ರೆ ಮಾಹಿತಿ ನೀಡ್ಲೇಬೇಕು ಅಂತ ತಾಕೀತು ಮಾಡಿದೆ. 2016 ರ ಹರಿಯಾಣ ನಾಗರಿಕ ಸೇವಾ ಮತ್ತು ಅಧಿನಿಯಮ 18[2] ಅಡಿಯಲ್ಲಿ ದಾಖಲೆಗಳನ್ನ ಸಲ್ಲಿಸಲು ಸೂಚಿಸಿದೆ.

ವರದಕ್ಷಿಣೆ ವಿರುದ್ಧ ಹೋರಾಟಕ್ಕಿಳಿದಿರುವ ಹರಿಯಾಣ ಸರ್ಕಾರ ತನ್ನ ಸಿಬ್ಬಂದಿಯಿಂದಲೇ ಹೊಸ ಅಭಿಯಾನವನ್ನ ಶುರುಮಾಡಿದೆ. ವರದಕ್ಷಿಣೆಯ ವಿವರ ಸಲ್ಲಿಸುವುದರ ಜೊತೆಗೆ ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ ಅನ್ನೋ ಆ್ಯಂಟಿ ಡೌರಿ ಲಾ ಲೆಟರ್ಗೆ ಸಹಿ ಹಾಕುವಂತೆ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...