alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮನೆಗೆ ಕುದುರೆ ಏರಿ ಬಂದ ವಧು

horse vadu

ಮದುವೆ ಎಂದಮೇಲೆ ಸಂಭ್ರಮ ಜಾಸ್ತಿ. ಈ ಸಂಭ್ರಮವನ್ನು ಹೆಚ್ಚಿಸಲು ಕೆಲವರು ವಿಭಿನ್ನವಾದುದನ್ನು ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೇ ರಾಜಸ್ತಾನದಲ್ಲಿ ಮದುವೆ ಮನೆಗೆ ವಧು ಬುಲೆಟ್ ನಲ್ಲಿ ಆಗಮಿಸುವ ಮೂಲಕ ಗಮನ ಸೆಳೆದಿದ್ದರು.

ಇದೀಗ ಹರಿಯಾಣದಲ್ಲಿ ವಧು, ಕುದುರೆ ಏರಿ ಮದುವೆ ಮಂಟಪಕ್ಕೆ ಆಗಮಿಸುವ ಮೂಲಕ ಗಮನ ಸೆಳೆದಿದ್ದಾರೆ. 25 ವರ್ಷದ ಶಿಕ್ಷಕಿಯಾಗಿರುವ ಮಮತಾ ಕುದುರೆ ಮೇಲೆ ಕುಳಿತು ಮದುವೆ ಮನೆಗೆ ಆಗಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಆ ಮೂಲಕ ವರ ಮಾತ್ರ ಕುದುರೆ ಏರಿ ಬರುತ್ತಿದ್ದ ಸಂಪ್ರದಾಯವನ್ನು ಮುರಿದಿದ್ದಾರೆ. ಹರಿಯಾಣದ ಈ ಗ್ರಾಮದಲ್ಲಿ ಕುದುರೆ ಏರಿ ಬಂದ ಮೊದಲ ವಧು ಮಮತಾ ಆಗಿದ್ದಾರೆ. ಮಮತಾ ಅವರಿಗೆ ತಂದೆ ಸಾಥ್ ನೀಡಿದ್ದಾರೆ.

ಅವರ ತಂದೆ ಬನ್ವಾರಿ ಲಾಲ್ ಹೇಳುವಂತೆ, ಹೆಣ್ಣುಮಕ್ಕಳು ಕೂಡ ಪುರುಷರಿಗೆ ಸಮಾನರು. ನಾನು ನನ್ನ ಮಗಳನ್ನು ಅದೇ ರೀತಿ ಬೆಳೆಸಿದ್ದೇನೆ. ಆಕೆಗೆ ಎಲ್ಲಾ ಜವಾಬ್ದಾರಿ ಕಲಿಸಿದ್ದೇನೆ ಎಂದು ಹೇಳಿದ್ದಾರೆ. ಕುದುರೆಯೇರಿ ಬಂದ ಮಮತಾ ಆ ಗ್ರಾಮದ ಬೇರೆಯವರಿಗೂ ಸ್ಪೂರ್ತಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...