alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ರಾಮ್ ರಹೀಮ್ ಭೇಟಿಗೆ ಬಂದ ಪತ್ನಿ ಬಿಕ್ಕಿಬಿಕ್ಕಿ ಅತ್ಲು

ಅತ್ಯಾಚಾರದ ಆರೋಪದ ಮೇಲೆ ಜೈಲು ಸೇರಿರುವ ಬಾಬಾ ರಾಮ್ ರಹೀಮ್ ಭೇಟಿಗೆ ಮೊದಲ ಬಾರಿ ಆತನ ಪತ್ನಿ ಬಂದಿದ್ದಳು. ಈ ವೇಳೆ ರಾಮ್ ರಹೀಮ್ ಹೇಳಿದ ಮಾತು ಕೇಳಿ ಬಿಕ್ಕಿಬಿಕ್ಕಿ ಅತ್ತಿದ್ದಾಳಂತೆ ಮೊದಲ ಪತ್ನಿ ಹರ್ಜೀತ್ ಕೌರ್.

ಸೋಮವಾರ ರಾಮ್ ರಹೀಮ್ ಕುಟುಂಬ ರೋಹ್ಟಕ್  ಜೈಲಿಗೆ ಬಂದಿತ್ತು. ರಾಮ್ ರಹೀಮ್ ಪತ್ನಿ ಹರ್ಜೀತ್ ಕೌರ್ ಕೂಡ ಜೈಲಿಗೆ ಬಂದಿದ್ದಳು. ಮೊದಲು ಪತ್ನಿಯನ್ನು ಭೇಟಿಯಾದ ರಾಮ್ ರಹೀಮ್ ಅಳಲು ಶುರುಮಾಡಿದ್ದಾನೆ. ಈ ಬಾರಿ ಕುಟುಂಬಸ್ಥರ ಜೊತೆ ದೀಪಾವಳಿ ಆಚರಿಸಲು ಆಗೋದಿಲ್ಲ. ನನ್ನ ಬೆನ್ನು ನೋವು ಜಾಸ್ತಿಯಾಗಿದೆ ಎಂದಿದ್ದಾನೆ. ಇದನ್ನು ಕೇಳಿ ಪತ್ನಿ ಕೂಡ ಅಳಲು ಶುರುಮಾಡಿದ್ದಾಳೆ.

ಪತ್ನಿ ನಂತ್ರ ಒಬ್ಬೊಬ್ಬರಾಗಿ ರಾಮ್ ರಹೀಮ್ ಭೇಟಿ ಮಾಡಿದ್ದಾರೆ. ನಂತ್ರ ರಾಮ್ ರಹೀಮ್ ಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಕುಟುಂಬಸ್ಥರು ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ರಾಮ್ ರಹೀಮ್ ಎಕ್ಸರೇ ವರದಿಯನ್ನು ನೀಡಿದ್ದಾರೆ. ಇಬ್ಬರು ಗಂಡು ಮಕ್ಕಳು, ಮಗಳು ಹಾಗೂ ಪತ್ನಿ ರಾಮ್ ರಹೀಮ್ ಭೇಟಿಗೆ ಬಂದಿದ್ದರು. ಬಟ್ಟೆ, ಕೆಲ ಸಿಹಿ ತಿಂಡಿಗಳನ್ನು ತಂದಿದ್ದರು ಎನ್ನಲಾಗಿದೆ. ಬಿಗಿ ಭದ್ರತೆಯಲ್ಲಿ ಬಂದಿದ್ದ ಕುಟುಂಬಸ್ಥರು ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ.

ಇಬ್ಬರು ಸಾಧ್ವಿಗಳ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿರುವ ರಾಮ್ ರಹೀಮ್ ಭೇಟಿ ಪಟ್ಟಿಯಲ್ಲಿ ಪತ್ನಿ ಹೆಸರನ್ನು ನೀಡಿಲ್ಲ. ತಾಯಿ, ಮಕ್ಕಳು ಹಾಗೂ ದತ್ತು ಪುತ್ರಿ ಹನಿಪ್ರೀತ್ ಹೆಸರಿದೆ. ಆದ್ರೆ ಹರ್ಜೀತ್ ಕೌರ್ ಹೆಸರಿರಲಿಲ್ಲ. ಇದು ಬಹು ಚರ್ಚೆಗೆ ಕಾರಣವಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...