alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ ಚಲ್ ಎಬ್ಬಿಸಿದೆ ಯುವ ನಾಯಕನ ಸೆಕ್ಸ್ ಸಿ.ಡಿ.

ಗುಜರಾತ್ ವಿಧಾನಸಭೆ ಚುನಾವಣೆ ಕಾವು ಏರತೊಡಗಿದ್ದಂತೆಯೇ ಆರೋಪ –ಪ್ರತ್ಯಾರೋಪಗಳ ಜೊತೆಗೆ ಡರ್ಟಿ ಪಾಲಿಟಿಕ್ಸ್ ಕೂಡ ಶುರುವಾಗಿದೆ.

ಗುಜರಾತ್ ಎಲೆಕ್ಷನ್ ವೇಳೆಯೇ ಯುವ ನಾಯಕ ಹಾರ್ದಿಕ್ ಪಟೇಲ್ ಅವರ ಸೆಕ್ಸ್ ಸಿ.ಡಿ. ಹರಿದಾಡ್ತಿದೆ. ಮಹಿಳೆಯೊಂದಿಗೆ ಹಾರ್ದಿಕ್ ಇರುವ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಗುಜರಾತ್ ಚುನಾವಣೆಯಲ್ಲಿ ಬಿ.ಜೆ.ಪಿ. ಗೆಲುವಿಗೆ ಕಾಂಗ್ರೆಸ್, ಹಾರ್ದಿಕ್ ಪಟೇಲ್ ಅಡ್ಡಿಯಾಗಿದ್ದಾರೆ. ಸಿ.ಡಿ.ಯಲ್ಲಿರುವುದು ತಾವಲ್ಲ ಎಂದು ಹಾರ್ದಿಕ್ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ಕಾರಣದಿಂದಲೇ ಬಿ.ಜೆ.ಪಿ. ಇಂತಹ ಸುಳ್ಳು ಆರೋಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಹೊಸ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಚುನಾವಣೆಯ ಸಂದರ್ಭದಲ್ಲಿಯೇ ಅವರ ರಾಸಲೀಲೆ ಸಿ.ಡಿ. ಬಿಡುಗಡೆಯಾಗಿ ಸಂಚಲನ ಮೂಡಿಸಿದೆ.

2017 ರ ಮೇ 17 ರಂದು ಹೋಟೆಲ್ ಕೋಣೆಯೊಂದರಲ್ಲಿ ಇದನ್ನು ಸೆರೆ ಹಿಡಿಯಲಾಗಿದೆ. ಸಿ.ಡಿ. ಬಿಡುಗಡೆಯಾಗುವುದನ್ನು ಮೊದಲೇ ಗ್ರಹಿಸಿದ್ದ ಹಾರ್ದಿಕ್ ಪಟೇಲ್, ನನ್ನ ಇಮೇಜ್ ಗೆ ಧಕ್ಕೆ ತರುವ ಸಿ.ಡಿ.ಯನ್ನು ಬಿ.ಜೆ.ಪಿ. ಬಿಡುಗಡೆ ಮಾಡಲಿದೆ ಎಂದು ವಾರದ ಮೊದಲೇ ಹೇಳಿದ್ದರು.

ಅವರ ನಿರೀಕ್ಷೆಯಂತೆಯೇ ಸಿ.ಡಿ. ಬಿಡುಗಡೆಯಾಗಿದ್ದು, ಭಾರೀ ಸಂಚಲನವನ್ನು ಮೂಡಿಸಿದೆ. ಚುನಾವಣೆ ಹೊಸ್ತಿಲಲ್ಲೇ ಬಿಡುಗಡೆಯಾಗಿರುವುದರಿಂದ ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...