alex Certify
ಕನ್ನಡ ದುನಿಯಾ       Mobile App
       

Kannada Duniya

ಆ ಫೋಟೋವನ್ನು ಮೋದಿಯವರಿಗೆ ಕಳುಹಿಸಿ ವಿವಾದಕ್ಕೆ ಸಿಲುಕಿದ ‘ಭಜ್ಜಿ’

harbhajan

ದೇಶದಲ್ಲಿ ಅಸಹಿಷ್ಣುತೆ ಕುರಿತಾದ ವಿವಾದ ಎದ್ದು, ಭಾರೀ ಪರ, ವಿರೋಧ ಚರ್ಚೆಗೆ ಗ್ರಾಸವಾಗಿ ಈಗಾಗಲೇ ತಣ್ಣಗಾಗಿದೆ. ಈ ಸಂದರ್ಭದಲ್ಲಿ ಟರ್ಬನೇಟರ್ ಖ್ಯಾತಿಯ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಹರ್ ಭಜನ್ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಮುಂಬೈನಲ್ಲಿ ಕೈಯಲ್ಲಿ ಹಸುಗೂಸನ್ನು ಇಟ್ಟುಕೊಂಡಿದ್ದ ಮಹಿಳೆಯೊಬ್ಬಳ ಜೊತೆಗೆ, ಪೊಲೀಸ್ ಒಬ್ಬ ಅಮಾನವೀಯವಾಗಿ ವರ್ತಿಸಿದ್ದಾನೆ. ಪುಟ್ಟ ಮಗುವಿನ ಜೊತೆಗಿದ್ದ ಆಕೆ ಅಂಗಲಾಚಿದರೂ, ಬಿಡದೇ ಲಾಠಿಯಿಂದ ತಿವಿದು ಕಿರುಕುಳ ನೀಡಿದ್ದಾನೆ. ಈ ಫೋಟೋವನ್ನು ಹರ್ ಭಜನ್ ಸಿಂಗ್, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ, ದೇಶದಲ್ಲಿ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಹರ್ ಭಜನ್ ಸಿಂಗ್ ಹೀಗೆ ಪ್ರಧಾನಿಗೆ ಸಲಹೆ ನೀಡಿದ್ದು, ವಿವಾದ ಸೃಷ್ಠಿಸಿದೆ. ಟ್ವಿಟರ್ ನಲ್ಲಿ ಭಾರೀ ಚರ್ಚೆಯೇ ನಡೆದಿದ್ದು, ಇದೆಲ್ಲಾ ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿಬಂದಿವೆ. ಅಸಹಿಷ್ಣುತೆ ರೀತಿ ನೀಡಿದ ಹೇಳಿಕೆ ಇದಾಗಿದೆ ಎಂದು ಆರೋಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...