alex Certify
ಕನ್ನಡ ದುನಿಯಾ       Mobile App
       

Kannada Duniya

ಮಗ-ಸೊಸೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ದಂಪತಿ

ಲುಧಿಯಾನಾದಲ್ಲಿ ಮಗ-ಸೊಸೆಯ ಕಿರುಕುಳ ತಾಳಲಾರದೆ ವೃದ್ಧ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 65 ವರ್ಷದ ಗುರ್ಮೀತ್ ಸಿಂಗ್ ಹಾಗೂ ಅವರ ಪತ್ನಿ 62 ವರ್ಷದ ಅವಿನಾಶ್ ಕೌರ್ ಇಬ್ಬರೂ ವಿಷ ಸೇವಿಸಿದ್ದಾರೆ. ಬಳಿಕ ಗುರ್ಮೀತ್ ನೇಣು ಹಾಕಿಕೊಂಡಿದ್ದಾರೆ.

ವಿಷಯ ತಿಳಿದ ಅಕ್ಕಪಕ್ಕದವರು ಇಬ್ಬರನ್ನೂ ರಕ್ಷಣೆ ಮಾಡಿ ಕೂಡಲೇ ಕ್ರಿಶ್ಚಿಯನ್ ಮೆಡಿಕಲ್ ಆಸ್ಪತ್ರೆಗೆ ದಾಖಲು ಮಾಡಿದ್ರು. ಸುಸೈಡ್ ನೋಟ್ ಬರೆದು ಅದನ್ನು ಕನ್ನಡಿಗೆ ಅಂಟಿಸಿ ಇಟ್ಟಿದ್ದರು. ಕಿರಿಯ ಮಗ ಮತ್ತು ಸೊಸೆಯ ಕಾಟ ತಾಳಲಾರದೆ ಸಾಯಲು ನಿರ್ಧರಿಸಿರೋದಾಗಿ ಬರೆದಿದ್ದರು.

ಅತ್ತೆ-ಮಾವನನ್ನು ಮನೆಯಿಂದ ಹೊರಹಾಕಲು ಸೊಸೆ ಪ್ಲಾನ್ ಮಾಡುತ್ತಿದ್ಲು. ಇನ್ನಿಲ್ಲದ ಕಿರುಕುಳ ಕೊಡುತ್ತಿದ್ಲು ಅಂತಾ ಹಿರಿಮಗ ಕುಲ್ವಿಂದರ್ ಸಿಂಗ್ ಹೇಳಿದ್ದಾನೆ. ಪ್ರತಿದಿನ ಬೆಳಗ್ಗೆ ದಂಪತಿ ವಾಕ್ ಹೋಗುತ್ತಿದ್ದರು. ಸೋಮವಾರ ಬೆಳಗ್ಗೆ ವಾಕಿಂಗ್ ಬಂದಿರಲಿಲ್ಲ. ಕರೆಯಲು ಅಂತಾ ಅಕ್ಕಪಕ್ಕದವರು ಬಂದಿದ್ರು.

ಎಷ್ಟು ಕೂಗಿದ್ರೂ ಒಳಗಿನಿಂದ ಪ್ರತಿಕ್ರಿಯೆ ಬಾರದ್ದರಿಂದ ಬಾಗಿಲು ಒಡೆದು ಒಳಬಂದಿದ್ದಾರೆ. ಮಹಿಳೆ ಪ್ರಜ್ಞೆತಪ್ಪಿ ನೆಲದ ಮೇಲೆ ಬಿದ್ದುಕೊಂಡಿದ್ರು. ಪತಿ ಗುರ್ಮೀತ್ ಸಿಂಗ್ ಫ್ಯಾನ್ ಗೆ ನೇಣು ಹಾಕೊಂಡಿದ್ರು. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...