alex Certify
ಕನ್ನಡ ದುನಿಯಾ       Mobile App
       

Kannada Duniya

ಮೂಗ-ಕಿವುಡ ಹುಡುಗಿಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಭೂಪ

ಮೂಗ-ಕಿವುಡ ಹುಡುಗಿಯರಿಗೆ ಅಶ್ಲೀಲ ವಿಡಿಯೋ ಕಾಲ್ ಮಾಡ್ತಿದ್ದ ಆರೋಪಿಯನ್ನು ಇಂಧೋರ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಾರಾಷ್ಟ್ರದ ಅಹಮದ್ ನಗರ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಮೂಗ-ಕಿವುಡ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಆರೋಪಿ ಕೂಡ ಮೂಗ-ಕಿವುಡ ಎಂದು ಪೊಲೀಸರು ಹೇಳಿದ್ದಾರೆ.

ಜೂನ್ ತಿಂಗಳಿನಲ್ಲಿ ಇಬ್ಬರು ಹುಡುಗಿಯರು ಅಪರಿಚಿತ ವ್ಯಕ್ತಿ ವಿರುದ್ಧ ದೂರು ನೀಡಿದ್ದರು. ವಿಡಿಯೋ ಕಾಲ್ ಮಾಡುವ ಜೊತೆಗೆ ಅಶ್ಲೀಲ ವಿಡಿಯೋ ಹಾಗೂ ಸಂದೇಶ ರವಾನೆ ಮಾಡುತ್ತಾನೆಂದು ದೂರು ಸಲ್ಲಿಸಿದ್ದರು. ಹುಡುಗಿಯರ ಮೊಬೈಲ್ ಪರಿಶೀಲನೆ ನಡೆಸಿದಾಗ ಇಬ್ಬರು ಹುಡುಗಿಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿರುವ ವ್ಯಕ್ತಿ ಒಬ್ಬನೆ ಎಂಬುದು ಗೊತ್ತಾಗಿದೆ. ಮೊಬೈಲ್ ನಂಬರ್ ಮೂಲಕ ಆರೋಪಿ ಅಹಮದ್ ನಗರದವನು ಎಂಬುದು ಪತ್ತೆಯಾಗಿದೆ.

ಅಹಮದ್ ನಗರಕ್ಕೆ ಹೋಗಿ ಆರೋಪಿ ಅಮೋಲ್ ನನ್ನು ಇಂಧೋರ್ ಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಮೋಲ್ ಕೂಡ ಮೂಗ-ಕಿವುಡ ಎಂಬುದು ಗೊತ್ತಾಗಿದೆ. ಅಮೋಲ್ ತಪ್ಪೊಪ್ಪಿಕೊಂಡಿದ್ದಾನೆ. ಆನ್ಲೈನ್ ಮೂಲಕ ಹುಡುಗಿಯರ ನಂಬರ್ ಸಿಕ್ತು ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...