alex Certify
ಕನ್ನಡ ದುನಿಯಾ       Mobile App
       

Kannada Duniya

15 ವರ್ಷಕ್ಕೆ ತಾಯಿಯಾದ್ಲು, 18ರಲ್ಲಾಯ್ತು ಮದುವೆ

ಅನು ಬಾಗೇಲ್ ಹಾಗೂ ಸಚಿನ್ ಕುಮಾರ್ ಜೋಡಿಯ ಲವ್ ಸ್ಟೋರಿ ಕೊನೆಗೂ ಸುಖಾಂತ್ಯವಾಗಿದೆ. ರಾಜಸ್ತಾನ ಮೂಲದ ಅನು ಹಿಂದುಳಿದ ವರ್ಗಕ್ಕೆ ಸೇರಿದವಳು. 15 ವರ್ಷದವಳಿದ್ದಾಗ್ಲೇ 21 ವರ್ಷದ ಸಚಿನ್ ಕುಮಾರ್ ಜೊತೆಗೆ 2015ರ ಫೆಬ್ರವರಿಯಲ್ಲಿ ಓಡಿ ಹೋಗಿದ್ಲು.

ಆಕೆಯ ಹೆತ್ತವರು ಸಚಿನ್ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. 2015ರ ಮೇನಲ್ಲಿ ಇಬ್ಬರನ್ನೂ ಪತ್ತೆ ಮಾಡಲಾಗಿತ್ತು. ಸಚಿನ್ ಜೈಲುಪಾಲಾಗಿದ್ದ. ಆ ಸಮಯದಲ್ಲಿ ಅನು ಗರ್ಭಿಣಿಯಾಗಿದ್ಲು. ನಂತರ ಹೆಣ್ಣುಮಗುವಿನ ತಾಯಿಯಾಗಿದ್ದಾಳೆ.

ಆ ಮಗುವಿಗೆ ಈಗ 2 ವರ್ಷ. ಜಾತಿ ಬೇರೆ ಅನ್ನೋ ಕಾರಣಕ್ಕೆ ಅನು ಹಾಗೂ ಸಚಿನ್ ಮದುವೆಗೆ ಹೆತ್ತವರ ಒಪ್ಪಿಗೆ ಇರಲಿಲ್ಲ. 18 ತಿಂಗಳು ಜೈಲಿನಲ್ಲಿದ್ದ ಸಚಿನ್ 2016ರಲ್ಲಿ ಬಿಡುಗಡೆಯಾದ. ಅಕ್ಟೋಬರ್ 16ರಂದು ಅನುಗೆ 18 ವರ್ಷ ತುಂಬಿದೆ. ಸಚಿನ್ ಒಪ್ಪಿದ್ರೆ ಅವನನ್ನೇ ಮದುವೆಯಾಗುವುದಾಗಿ ಕೋರ್ಟ್ ಮುಂದೆ ಅನು ಹೇಳಿಕೆ ನೀಡಿದ್ದಳು.

ಕೊನೆಗೆ ಸಚಿನ್ ಹೆತ್ತವರು ಕೂಡ ಈ ಮದುವೆಗೆ ಸಮ್ಮತಿ ನೀಡಿದ್ರು. ಅನು ಹಾಗೂ ಸಚಿನ್ ಮದುವೆ ನಿರ್ವಿಘ್ನವಾಗಿ ನೆರವೇರಿದೆ. 2 ವರ್ಷದ ಮಗಳು ಹೆತ್ತವರ ಮದುವೆಗೆ ಸಾಕ್ಷಿಯಾಗಿದ್ದಳು. ಆದ್ರೆ ಅನು ಕುಟುಂಬದವರು ಈ ಮದುವೆಗೆ ಹಾಜರಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...