alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ರಾಜ್ಯಗಳಿಗೆ ಸೇರಿದೆ ಈ ರೈಲ್ವೇ ನಿಲ್ದಾಣ…!

ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಭಾರತೀಯ ರೈಲ್ವೆ ಎಷ್ಟು ಸರಳವೋ ಅಷ್ಟೇ ನಿಗೂಢತೆಯನ್ನ ಹೊಂದಿದೆ. ರೈಲ್ವೆ ಇಲಾಖೆಯಲ್ಲಿ 1.4 ಮಿಲಿಯನ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗಾಗಿ ಭಾರತೀಯ ರೈಲ್ವೆ ಜಗತ್ತಿನ 8ನೇ ಉದ್ಯೋಗಿಯಾಗಿದ್ದು,  ಸರ್ಕಾರದಿಂದ ನಿರ್ವಹಿಸಲ್ಪಡುವ ಅತಿ ದೊಡ್ಡ ನೆಟ್ ವರ್ಕ್ ಕೂಡಾ ಆಗಿದೆ. ಈ ಮೂಲಕ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ.

ಭಾರತೀಯ ರೈಲ್ವೆ ಬಗ್ಗೆ ನಿಮಗೆ ಹಲವು ಮಾಹಿತಿಗಳು ಗೊತ್ತಿರಬಹುದು. ಪತ್ರಿಕೆಗಳಲ್ಲಿ ಓದಿರಬಹುದು. ಆದ್ರೆ ಇಲ್ಲೊಂದು ರೈಲ್ವೆ ನಿಲ್ದಾಣದ ಬಗ್ಗೆ ಆಕರ್ಷಕ ಮಾಹಿತಿಯನ್ನ ನೀವೆಲ್ಲೂ ಕೇಳಿರಲ್ಲ ಅನ್ಸತ್ತೆ.

ನವಪುರ್, ಮಹಾರಾಷ್ಟ್ರದ  ನಗರ ಪಂಚಾಯಿತಿಯ (ಪುರಸಭೆ) ಒಂದು ರೈಲ್ವೆ ನಿಲ್ದಾಣ. ಆದ್ರೆ ಈ ರೈಲ್ವೆ ನಿಲ್ದಾಣ ಕೇವಲ ಒಂದು ರಾಜ್ಯಕ್ಕೆ ಸೇರಿದ್ದಲ್ಲ. ನವಪುರ್ ರೈಲ್ವೆ ನಿಲ್ದಾಣದ ಅರ್ಧ ಭಾಗ ಮಹಾರಾಷ್ಟ್ರಕ್ಕೆ, ಇನ್ನರ್ಧ ಭಾಗ ಗುಜರಾತ್ ಗೆ ಸೇರಿದೆ. ಮಹಾರಾಷ್ಟ್ರ- ಗುಜರಾತ್ ನ ಮಧ್ಯ ಭಾಗದಲ್ಲಿರುವ ನಂದೂರ್ ಬಾರ್ ಜಿಲ್ಲೆಯ ನವಪುರ್ ತಾಲೂಕಿನಲ್ಲಿ ಈ ನಿಲ್ದಾಣವಿರುವುದರಿಂದ ರೈಲ್ವೆ ಇಲಾಖೆ ಇದನ್ನು ವಿಭಾಗಿಸಿತು. ನವಪುರ್ ರೈಲ್ವೆ ನಿಲ್ದಾಣವು ಭಾರತೀಯ ರೈಲ್ವೆ ಅಡಿಯಲ್ಲಿ ವಿಶಿಷ್ಟವಾದ ಕಾರ್ಯಾಚರಣೆ ನಡೆಸುತ್ತಿದೆ. ಇದರಂತೆ ಮಧ್ಯ ಪ್ರದೇಶ-ರಾಜಸ್ಥಾನ್ ಮಧ್ಯದಲ್ಲಿರುವ ಭವಾನಿಮಂಡಿ ರೈಲ್ವೆ ನಿಲ್ದಾಣ ಕೂಡಾ ಎರಡು ರಾಜ್ಯಗಳಿಗೆ ಸೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...