alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು

panchkula-lady-

ಬಾಲ್ಯದಲ್ಲಿ ಶುರುವಾದ ಚಟವೊಂದು ಈಗ ಆಸ್ಪತ್ರೆ ಸೇರುವಂತೆ ಮಾಡಿದೆ. ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ 30 ವರ್ಷವಾದ ಮೇಲೆ ಮಹಿಳೆಗೆ ಈಗ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಹಿಳೆಯ ಹೊಟ್ಟೆಯಲ್ಲಿದ್ದ ವಸ್ತುವನ್ನು ನೋಡಿ ವೈದ್ಯರು ಕಂಗಾಲಾಗಿದ್ದಾರೆ.

ಛತ್ತೀಸಗಢದ ಪಂಚಕುಲದ ಸೆಕ್ಟರ್-6ರ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಚಿಕ್ಕವಳಿರುವಾಗಲೇ ಕೂದಲು ತಿನ್ನುತ್ತಿದ್ದ ಮಹಿಳೆ ಈಗ ಹಾಸಿಗೆ ಹಿಡಿದಿದ್ದಾಳೆ. ನೀರು ಕೂಡ ಜೀರ್ಣವಾಗ್ತಿರಲಿಲ್ಲ. 9 ವರ್ಷವಿರುವಾಗಲೇ ಕೂದಲು ತಿನ್ನುವ ಅಭ್ಯಾಸ ಶುರುವಾಗಿತ್ತು. ಹೊಟ್ಟೆಯಲ್ಲಿ ಕೂದಲಿನ ರಾಶಿಯೇ ಇತ್ತು. ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರು ಕೂದಲನ್ನು ಹೊರ ತೆಗೆದಿದ್ದಾರೆ.

ನಾರಾಯಣಗಢದ ಸುನಿತಾ ಎಂಬಾಕೆಯೇ ಕೂದಲು ತಿನ್ನುತ್ತಿದ್ದ ಮಹಿಳೆ. ಸುನೀತಾ ಹೊಟ್ಟೆಯಲ್ಲಿ ಎಂಟು ಸೆಂ.ಮೀ ಉದ್ದದ ಕೂದಲಿತ್ತು. ಸ್ಕ್ಯಾನಿಂಗ್ ವೇಳೆ ಕೂದಲಿರುವುದು ತಿಳಿದು ಬಂದಿದೆ. ನಂತ್ರ ವೈದ್ಯರು ಆಪರೇಷನ್ ಮಾಡಿದ್ದಾರೆ. ಬಾಲ್ಯದಲ್ಲಿ ಕೂದಲು ತಿನ್ನಲು ಶುರುಮಾಡಿದ ಸುನೀತಾ ದೊಡ್ಡವಳಾಗ್ತಿದ್ದಂತೆ ಹೆಚ್ಚು ಹೆಚ್ಚು ಕೂದಲು ತಿನ್ನಲು ಶುರುಮಾಡಿದ್ದಳು. ಕೂದಲು ಸಿಗದೇ ಹೋದಲ್ಲಿ ಪ್ಲಾಸ್ಟಿಕ್ ಅಥವಾ ಸೆಣಬಿನ ಹಗ್ಗವನ್ನು ತಿನ್ನುತ್ತಿದ್ದಳಂತೆ. ವೈದ್ಯರ ಪ್ರಕಾರ ಹತ್ತರಿಂದ ಹನ್ನೆರೆಡು ವರ್ಷದ ಕೆಲ ಹುಡುಗಿಯರಲ್ಲಿ ಕೂದಲು ತಿನ್ನುವ ರೋಗ ಶುರುವಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...