alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹುಡುಗಿ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

haiball-watermelon-size-1

ಹುಡುಗಿಯೊಬ್ಬಳ ಹೊಟ್ಟೆಯಲ್ಲಿ ಸದಾ ನೋವು ಕಾಣಿಸಿಕೊಳ್ತಿತ್ತು. ಸರಿಯಾಗಿ ಆಹಾರ ಸೇವನೆ ಮಾಡಲು ಆಗ್ತಿರಲಿಲ್ಲ. ಸರಿಯಾಗಿ ನಿದ್ರೆ ಬರ್ತಿರಲಿಲ್ಲ. ಆಹಾರ ತಿನ್ನದ ಕಾರಣ ಆಕೆ ತೂಕ ಇಳಿಯುತ್ತಿತ್ತು. ನಿಶಕ್ತಿ ಕಾಡುತ್ತಿತ್ತು. ಇದ್ರಿಂದ ಆತಂಕಗೊಂಡ ಪಾಲಕರು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಏನೋ ಇದೆ ಎಂಬುದು ಗೊತ್ತಾಗಿದೆ. ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಶಸ್ತ್ರಚಿಕಿತ್ಸೆ ಶುರುವಾಗಿದೆ. ಆಗ ಹುಡುಗಿ ಹೊಟ್ಟೆಯಲ್ಲಿ ಕಂಡ ವಸ್ತು ನೋಡಿ ವೈದ್ಯರೇ ದಂಗಾಗಿದ್ದಾರೆ. ಹುಡುಗಿ ಹೊಟ್ಟೆಯಲ್ಲಿದ್ದದ್ದು ಬೇರೇನೂ ಅಲ್ಲ, ಕೂದಲಿನ ಒಂದು ಪಿಂಡಿ.

ನಿಧಾನವಾಗಿ ಕೂದಲಿನ ಗಂಟನ್ನು ಹೊರತೆಗೆದಿದ್ದಾರೆ ವೈದ್ಯರು. ಕೂದಲು ದೊಡ್ಡ ಕಲ್ಲಂಗಡಿ ಆಕಾರದಲ್ಲಿತ್ತಂತೆ. ಈ ಘಟನೆ ನಡೆದಿರುವುದು ಡೆಹ್ರಾಡೂನ್ ನಲ್ಲಿ. ಪೌಡಿ ಜಿಲ್ಲೆಯ 16 ವರ್ಷದ ಆಕಾಂಕ್ಷ ಕುಮಾರಿ ಹೊಟ್ಟೆಯಿಂದ ಕೂದಲನ್ನು ವೈದ್ಯರು ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ಪೂರ್ತಿ ವಿಡಿಯೋವನ್ನು ಅವರು ಹಂಚಿದ್ದಾರೆ.

ಕೂದಲ ಪಿಂಡಿ ತೂಕ ಸುಮಾರು ಎರಡು ಕೆ.ಜಿ ಇತ್ತಂತೆ. ಹೊಟ್ಟೆಯ ಅರ್ಧ ಭಾಗವನ್ನು ಆವರಿಸಿತ್ತಂತೆ. ಚಿಕ್ಕಳಿದ್ದಾಗ ಆಕಾಂಕ್ಷ ಕೂದಲು ತಿನ್ನುತ್ತಿದ್ದಳಂತೆ. ಇದು ಅಪ್ಪ-ಅಮ್ಮನಿಗೆ ತಿಳಿದಿರಲಿಲ್ಲವಂತೆ. ಇದೊಂದು ರೋಗವಾಗಿದ್ದು, ಈ ರೋಗದಿಂದ ಬಳಲುವವರು ತಮ್ಮ ಕೂದಲನ್ನು ತಾವು ತಿನ್ನುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...