alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕೊಟ್ಟ ಮೊಬೈಲ್ ನಿಂದ ಹೊರಬಿತ್ತು ವೈದ್ಯ ಪತಿಯ ಅಸಲಿಯತ್ತು

ಪತ್ನಿ ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್ ತನ್ನನ್ನು ಜೈಲಿಗೆ ಕಳಿಸುತ್ತೆ ಅಂತಾ ಎಂದೂ ಪತಿ ಯೋಚನೆ ಮಾಡಿರಲಿಲ್ಲ. ಆದ್ರೆ ಪತ್ನಿ  ಗಿಫ್ಟ್ ಮೂಲಕ ನೀಡಿದ್ದ ಮೊಬೈಲ್ ಪತಿಯ ಅತ್ಯಾಚಾರದ ಸತ್ಯ ಬಿಚ್ಚಿಟ್ಟಿದೆ. ಮುಂಬೈನ ಮಹಿಳೆಯೊಬ್ಬಳು ತನ್ನ ಡಾಕ್ಟರ್ ಪತಿಗೆ ಮೊಬೈಲ್ ಉಡುಗೊರೆ ನೀಡಿದ್ದಳು. ಈ ಮೊಬೈಲ್ ಮೂಲಕ ಪತಿ ಮಹಿಳಾ ಡಾಕ್ಟರ್ ರೇಪ್ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಮೊಬೈಲ್ ಗಿಫ್ಟ್ ನೀಡುವ ವೇಳೆ ಮಹಿಳೆ ಸಾಧನವೊಂದನ್ನು ಅಳವಡಿಸಿದ್ದಳು. ಈ ಆ್ಯಪ್ ಪತಿಗೆ ಬರ್ತಿದ್ದ ಎಲ್ಲ ಕರೆ, ವಾಟ್ಸ್ ಅಪ್, ಮೆಸ್ಸೇಜ್ ಎಲ್ಲವೂ ಮಹಿಳೆ ಮೊಬೈಲ್ ಹಾಗೂ ಮೇಲ್ ಗೆ ಬರ್ತಿತ್ತು. 2017 ಅಕ್ಟೋಬರ್ 20ರಂದು ಮಹಿಳಾ ವೈದ್ಯೆ ಯನ್ನು ಹೊರಗೆ ಕರೆದೊಯ್ದಿದ್ದ ಆರೋಪಿ ಅಜಯ್ ಮದ್ಯ ಕುಡಿಸಿದ್ದಾನೆ. ನಂತ್ರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ.

ಈ ವೇಳೆ ಮಹಿಳಾ ವೈದ್ಯೆ ಆರೋಗ್ಯ ಹದಗೆಟ್ಟಿದೆ. ಹಾಗಾಗಿ ಮಹಿಳಾ ವೈದ್ಯೆ ಅಜಯ್ ರೂಮ್ ನಲ್ಲಿಯೇ ಮಲಗಿದ್ದಾಳೆ. ಬೆಳಗ್ಗೆ ಎಚ್ಚರವಾದಾಗ ಮಹಿಳೆ ಕಂಗಾಲಾಗಿದ್ದಾಳೆ. ಅಜಯ್ ಗೆ ಕರೆ ಮಾಡಿದ್ರೆ ಆತ ಎಲ್ಲ ಮುಗೀತು ಎಂದಿದ್ದಾನೆ. ಇದನ್ನು ಪೋನ್ ನಲ್ಲಿ ಕೇಳಿದ ಅಜಯ್ ಪತ್ನಿ ಮಹಿಳಾ ವೈದ್ಯೆ ಸಹಾಯಕ್ಕೆ ಹೋಗಿದ್ದಾಳೆ. ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ಅಜಯ್ ಗೆ ಜೈಲು ಶಿಕ್ಷೆ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...