alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ಕಿ ಪ್ರಾಣಕ್ಕೇ ಕುತ್ತು ತಂತು ಜಿಮ್ ವರ್ಕೌಟ್

gym-1

ಅತಿಯಾದ್ರೆ ವ್ಯಾಯಾಮ ಕೂಡ ಒಳ್ಳೆಯದಲ್ಲ. ದೈಹಿಕ ಕಸರತ್ತು, ಜಿಮ್ ಇವೆಲ್ಲವನ್ನು ಮಿತವಾಗಿ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ. ಆದ್ರೆ ಮಿತಿ ಮೀರಿದ್ರೆ ನಿಮ್ಮ ಪ್ರಾಣಕ್ಕೇ ಅದು ಸಂಚಕಾರ ತರಬಲ್ಲದು. 22 ವರ್ಷದ ಟೆಕ್ಕಿಯೊಬ್ಬ ಅತಿಯಾದ ಎಕ್ಸರ್ಸೈಸ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ.

ಡೆಲ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ ವರುಣ್ ಕುಮಾರ್, ಸ್ವಲ್ಪ ಮೊದಲೇ ಕಚೇರಿಗೆ ಬಂದಿದ್ದ. ಶಿಫ್ಟ್ ಶುರುವಾಗೋದ್ರೊಳಗೆ ಸ್ವಲ್ಪ ಎಕ್ಸರ್ಸೈಸ್ ಮಾಡೋಣ ಅಂದ್ಕೊಂಡು ಆಫೀಸ್ ಜಿಮ್ ಗೆ ಹೋಗಿದ್ದಾನೆ. ವರ್ಕೌಟ್ ಮಾಡ್ತಿದ್ದಾಗ ದಿಢೀರನೆ ವರುಣ್ ಗೆ ಎದೆನೋವು ಶುರುವಾಗಿತ್ತು.

ಕೆಲವೇ ಕ್ಷಣಗಳಲ್ಲಿ ವರುಣ್ ಪ್ರಜ್ಞೆತಪ್ಪಿ ಬಿದ್ದಿದ್ದ. ಕೂಡಲೇ ಕಚೇರಿ ಕ್ಲಿನಿಕ್ ಗೆ ದಾಖಲಿಸಲಾಯ್ತು. ವರುಣ್ ಹೃದಯ ಬಡಿತ ತೀವ್ರವಾಗಿದೆ ಅಂತಾ ವೈದ್ಯರು ತಿಳಿಸಿದ್ರು. ಮತ್ತೆ ವರುಣ್ ಗೆ ಪ್ರಜ್ಞೆ ಮರಳಲೇ ಇಲ್ಲ, ಆತ ಮೃತಪಟ್ಟಿದ್ದಾನೆ.

ವೈಜಾಗ್ ಮೂಲದ ವರುಣ್ ರಾತ್ರಿ ಸರಿಯಾಗಿ ಊಟ ಮಾಡಿರಲಿಲ್ಲ, ಬೆಳಗ್ಗೆ ಹಸಿದ ಹೊಟ್ಟೆಯಲ್ಲೇ ಜಿಮ್ ಮಾಡಲು ಬಂದಿದ್ದಾನೆ. ಈ ಹಿಂದೆ ಅವನಿಗೆ ಹೃದಯದ ತೊಂದರೆ ಇತ್ತು. ದೇಹದಲ್ಲಿ ಸ್ಟ್ಯಾಮಿನಾ ಕೂಡ ಇರಲಿಲ್ಲ. ದಿಢೀರಂತ ಅತಿಯಾದ ವ್ಯಾಯಾಮ ಮಾಡಿದ್ದರಿಂದ ಈ ದುರಂತ ಸಂಭವಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...