alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಮ್ ಗೆ ಹೋಗುವ ಮಹಿಳೆಯರು ಓದಲೇಬೇಕಾದ ಸುದ್ದಿ

gym-633097

ಉತ್ತಮ ಆರೋಗ್ಯಕ್ಕೆ, ಸೌಂದರ್ಯ ಕಾಪಾಡಿಕೊಳ್ಳೋದಿಕ್ಕೆ ಜನ ಜಿಮ್ ಗೆ ಹೋಗ್ತಾರೆ. ಜಿಮ್ ಗೆ ಹೋಗುವ ಮಹಿಳೆಯರ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಆದ್ರೆ ಜಿಮ್ ಗೆ ಹೋಗುವ ಮಹಿಳೆಯರು ಎಚ್ಚರದಿಂದಿರುವುದು ಒಳ್ಳೆಯದು. ಯಾಕೆಂದ್ರೆ ಕೆಲ ಜಿಮ್ ಗಳು ಮಹಿಳೆಯರಿಗೆ ಮತ್ತು ಬರುವ ಜ್ಯೂಸ್ ಕುಡಿಸಿ, ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿದು ಹಣ ಮಾಡ್ತಾ ಇವೆ.

ಯಸ್ ಲುಧಿಯಾನಾದಲ್ಲಿ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ. 36 ವರ್ಷದ ಮಹಿಳೆ ಜಿಮ್ ಮಾಲೀಕನಿಂದ ಮೋಸ ಹೋಗಿದ್ದಾಳೆ. 7 ವರ್ಷಗಳ ಹಿಂದೆ ಆಕೆ ಜಿಮ್ ಗೆ ಸೇರಿದ್ದಳಂತೆ. ಜಿಮ್ ಮಾಲೀಕ ಜಸವೀರ್ ಸಿಂಗ್ ಹಾಗೂ ಮಹಿಳೆ ಒಳ್ಳೆಯ ಸ್ನೇಹಿತರಾದರಂತೆ. ಮಹಿಳೆ ವಿಶ್ವಾಸಗಳಿಸಿದ ಜಿಮ್ ಮಾಲೀಕ 50 ಲಕ್ಷ ಹಣ ಪಡೆದಿದ್ದಾನೆ.

ಜಿಮ್ ವೇಳೆ ಮಾಲೀಕ ಮಹಿಳೆಗೆ ಅನೇಕ ಬಾರಿ ಎನರ್ಜಿ ಡ್ರಿಂಕ್ ನೀಡುತ್ತಿದ್ದನಂತೆ. ಇದನ್ನು ಕುಡಿದ ಮಹಿಳೆ ಅಮಲಿನಲ್ಲಿರುತ್ತಿದ್ದಳಂತೆ. ಆಗ ಅತ್ಯಾಚಾರ ನಡೆಸಿದ್ದಲ್ಲದೆ, ಅಶ್ಲೀಲ ವಿಡಿಯೋ ಮಾಡಿದ್ದಾನೆ. ಕೊಟ್ಟ ಹಣ ವಾಪಸ್ ಪಡೆಯಲು ಹೋದಾಗ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನಂತೆ. ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...